ಏರುತ್ತಿರುವ ಮೊಟ್ಟೆ ದರ ಬಡವರ ಬದುಕಿಗೆ ಬರೆ

0
151

ಸನ್ಮಾರ್ಗ ವಾರ್ತೆ

ಬೆಂಗಳೂರು: ಬಡವರ ಪಾಲಿನ ಮಾಂಸಾಹಾರ ಎನಿಸಿದ್ದ ಮೊಟ್ಟೆಗೂ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಪ್ರತಿ ಮೊಟ್ಟೆಗೆ ಒಂದು ರೂ, ಬೆಲೆ ಹೆಚ್ಚಿದೆ.

ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ
ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.58ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್‌ಗೆ ಬರೋಬ್ಬರಿ 575 ರೂಪಾಯಿ ಆಗಿದೆ.

ಬಹುತೇಕರು ಮೊಟ್ಟೆ ತಿನ್ನುವವರೇ. ಸಸ್ಯಾಹಾರಿಗಳೂ ಕೂಡ ಮೊಟ್ಟೆ ತಿನ್ನಬಹುದು ಎಂದು ವೈಜ್ಞಾನಿಕ ಅಭಿಪ್ರಾಯ ಸೃಷ್ಟಿಯಾದ ಮೇಲೆ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಬಡವರು ಮೊಟ್ಟೆಯನ್ನೂ ತಿನ್ನಲಾರದಂತೆ ಬೆಲೆ ಏರುತ್ತಿದೆ.