ಪೆರೋಲ್ ಮೇಲೆ ಬಂದ ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ!

0
21

ಸನ್ಮಾರ್ಗ ವಾರ್ತೆ

ಲಕ್ನೋ: ಅತ್ಯಾಚಾರ ಮತ್ತು ಹತ್ಯೆಯ ಕಾರಣಕ್ಕೆ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿ ಇದೀಗ ಪೆರೋಲ್ ಮೂಲಕ ಹೊರಗಡೆ ಇರುವ ಡೇರಾ ಸಚ್ಚಾ ಸೌದಾದ ನಾಯಕ ಗುರುಮಿಥ್ ರಾಮ್ ರಹೀಮ್ ಸಿಂಗ್ ತಲವಾರಿನಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದ್ದಾನೆ. ಈತ 40 ದಿನಗಳ ಪೆರೂಲ್ ನಲ್ಲಿ ಜೈಲಿನಿಂದ ಹೊರಗಡೆ ಇದ್ದಾನೆ.

ಉತ್ತರ ಪ್ರದೇಶದ ಬರ್ನಾವು ಎಂಬ ಆಶ್ರಮದಲ್ಲಿ ಸದ್ಯ ಈತ ಇದ್ದು ಭೀಮ ಗಾತ್ರದ ಕೇಕ್ ಅನ್ನು ತಳವಾರಿನಿಂದ ಕತ್ತರಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ಹಿಂದಿನ ಡೇರಾ ಸಚ್ಚಾ ಸೌದಾದ ನಾಯಕ ಶಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕ ಸಂಭ್ರಮದಲ್ಲಿ ಭಾಗವಹಿಸುವುದಕ್ಕಾಗಿ ಈತ ಜಾಮೀನು ಅಪೇಕ್ಷೆ ಸಲ್ಲಿಸಿದ್ದ. ಜನವರಿ 25ರಂದು ಅವರ ಜನ್ಮದಿನವಾಗಿದೆ. ಕಳೆದ 14 ತಿಂಗಳಲ್ಲಿ ನಾಲ್ಕನೇ ಬಾರಿ ಮತ್ತು ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿ ಈತನಿಗೆ ಪೆರೋಲ್ ಸಿಕ್ಕಿದೆ. 2022 ಅಕ್ಟೋಬರ್ ನಲ್ಲಿ ಈತನಿಗೆ 40 ದಿನಗಳ ಪೆರೋಲ್ ಸಿಕ್ಕಿತ್ತು. ಆಗ ಅಲ್ಲಿ ಪಂಚಾಯಿತಿ ಚುನಾವಣೆಯ ಸಂದರ್ಭವಾಗಿತ್ತು.

LEAVE A REPLY

Please enter your comment!
Please enter your name here