ಈಜಿಪ್ಟ್: ಆರು ವರ್ಷಗಳ ನಂತರ ಪ್ರಮುಖ ಜಡ್ಜ್ ಬಿಡುಗಡೆ

0
493

ಸನ್ಮಾರ್ಗ ವಾರ್ತೆ

ಕೈರೊ,ಡಿ.7: ಈಜಿಪ್ಟಿನ ಪ್ರಮುಖ ಜಡ್ಜ್ ಮಹ್ಮೂದ್ ಅಲ್ ಕುದೈರಿ ಆರು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗುರುವಾರ ಅವರ ವಕೀಲರು ಈ ವಿಷಯ ತಿಳಿಸಿದರು. 2013 ಅರಬ್ ಕ್ರಾಂತಿಯ ನಂತರ ಕುದೈರಿಯವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. 79 ವರ್ಷದ ಅವರನ್ನು ಅಲ್‍ ಸಿಸಿ ಸರಕಾರ ಅವರನ್ನು ಜೈಲಿಗೆ ಹಾಕಿತ್ತು. 2013ರ ನವೆಂಬರ್ 24ಕ್ಕೆ ಅವರನ್ನು ಬಂಧಿಸಲಾಗಿದ್ದು ನ್ಯಾಯಾಂಗವನ್ನು ಅಪಮಾನಿಸಿದ್ದಾರೆ, ವಕೀಲರಿಗೆ ಕಿರುಕುಳ ನೀಡಿದ್ದಾರೆ ಎಂದು ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಹುಸ್ನಿ ಮುಬಾರಕ್ ಸರಕಾರದ ಅಧೀನದಲ್ಲಿ ನ್ಯಾಯಾಂಗವನ್ನು ಸ್ವತಂತ್ರಗೊಳಿಸಲು ಕುದೈರಿಯವರು ಅಭಿಯಾನ ನಡೆಸಿದರು. ಇದರೊಂದಿಗೆ ಅವರ ಸರಕಾರ ಕೆಂಗಣ್ಣಿಗೆ ಗುರಿಯಾದರು. ನಂತರ ಸಿಸಿ ಸರಕಾರವನ್ನು ಅವರು ಟೀಕಿಸಿದರು. ಸಿಸಿಯ ಬುಡಮೇಲು ಕೃತ್ಯವನ್ನು ವಿರೋಧಿಸಿದ್ದಕ್ಕಾಗಿ ಸಿಸಿ ಅವರ ವಿರುದ್ಧ ಪ್ರತಿಕಾರ ಎಸಗಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.