ಕರ್ನಾಟಕ: ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿಗೆ ಮುನ್ನಡೆ

0
834

ಸನ್ಮಾರ್ಗ ವಾರ್ತೆ

ಬೆಂಗಳೂರು, ಡಿ.6: ಕರ್ನಾಟಕದ ಉಪ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವರದಿಯಾಗಿದೆ. ಬಿಜೆಪಿ ಸರಕಾರ ಅಪಾಯದಿಂದ ಪಾರಾಗುವ ಎಲ್ಲ ಸಾಧ್ಯತೆಗಳನ್ನು ಎಕ್ಸಿಟ್ ಪೋಲ್ ಎತ್ತಿ ತೋರಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಹದಿನಾಲ್ಕು ಶಾಸಕರು ಮತ್ತು ಕೆಪಿಜೆಪಿಯ ಒಂದು ಸೀಟಿನಲ್ಲಿ ಉಪಚುನಾವಣೆ ನಡೆದಿದೆ. ಬಿಜೆಪಿ ಒಂಬತ್ತರಿಂದ ಹನ್ನೆರಡು ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮೂರು ಅಥವಾ ಆರು ಸೀಟು ಗೆಲ್ಲಬಹುದು ಎಂದು ಮತ್ತು ಜೆಡಿಎಸ್ ಒಂದು ಸೀಟು ಗೆಲ್ಲಬಹುದೆಂದು ಸಮೀಕ್ಷೆ ಹೇಳುತ್ತಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಸಿಗಬಹುದೆಂದು ಹೇಳಲಾಗುತ್ತಿದೆ.