ಚುನಾವಣಾ ಆಯೋಗ 10 ನೋಟಿಸ್ ಕಳಿಸಿದರೂ ನನ್ನ ಉತ್ತರ ಒಂದೇ: ಮಮತಾ ಬ್ಯಾನರ್ಜಿ

0
444

ಸನ್ಮಾರ್ಗ ವಾರ್ತೆ

ಕೊಲ್ಕತಾ : ರಾಜ್ಯದ ಮುಸ್ಲಿಂ ಮತಗಳನ್ನು ಒಡೆದು ಹೋಗಬಾರದೆಂದು ಚುನಾವಣಾ ರಾಲಿಯಲ್ಲಿ ಭಾಷಣ ಮಾಡಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನೋಟಿಸು ಕಳುಹಿಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದು ನನ್ನ ವಿರುದ್ಧ ಚುನಾವಣಾ ಆಯೋಗ ಒಂದಲ್ಲ ಹತ್ತು ನೋಟಿಸು ಕಳುಹಿಸಿದರೂ ಅದೇ ನನ್ನ ಉತ್ತರ ಎಂದು ಖಾರವಾಗಿ ಹೇಳಿದ್ದಾರೆ.

48 ಗಂಟೆಗಳ ಒಳಗೆ ವಿವರಣೆ ನೀಡಬೇಕೆಂದು ಚುನಾವಣಾ ಆಯೋಗ ಮಮತಾ ಬ್ಯಾನರ್ಜಿಗೆ ನೋಟಿಸ್ ಕಳುಹಿಸಿದೆ. ಆದರೆ ಘಟನೆಗೆ ಸಂಬಂಧಿಸಿ ಭೋಂಜೂರಿನಲ್ಲಿ ನಡೆದ ರಾಲಿಯಲ್ಲಿ ಮಮತಾ ಬ್ಯಾನರ್ಜಿ ನಾನು ಎಲ್ಲರೊಂದಿಗೆ ಹೇಳುತ್ತೇನೆ. ಒಗ್ಗಟ್ಟಾಗಿ ಮತದಾನ ಮಾಡಿರಿ. ಭಿನ್ನತೆ ಆಗಬಾರದು. ಒಮ್ಮೆಯೂ ಹಿಂದೂಗಳು, ಮುಸ್ಲಿಮರು, ಸಿಕ್ಖರು, ಕ್ರೈಸ್ತರು ಯಾರೂ ಕೂಡ ಒಂದೇ ಒಂದು ಮತವನ್ನು ಬಿಜೆಪಿಗೆ ಕೊಡಬೇಡಿರಿ ಎಂದು ಅವರು ಹೇಳಿದ್ದರು.

ನಂದಿ ಗ್ರಾಮದ ಮುಸ್ಲಿಮರನ್ನು ಪಾಕಿಸ್ತಾನಿಗಳೆಂದು ಕರೆದ ಜನರ ವಿರುದ್ಧ ಎಷ್ಟು ದೂರುಗಳನ್ನು ಈ ಚುನಾವಣಾ ಆಯೋಗ ದಾಖಲಿಸಿಕೊಂಡಿದೆ. ಅವರಿಗೆ ನಾಚಿಕೆಯಾಗಲ್ವೇ, ನನ್ನ ವಿರುದ್ಧ ಅವರಿಗೆ ಏನೂ ಮಾಡಲು ಆಗದು ಎಂದು ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಸೆಡ್ಡು ಹೊಡೆದಿದ್ದಾರೆ.