ಹೊಸದಿಲ್ಲಿ,ಸೆ.20: ಇಂದು ಚುನಾವಣಾ ಆಯೋಗದ ಸಭೆಯ ನಡೆಯಲಿದ್ದು ಹರಿಯಾಣ, ಮಹಾರಾಷ್ಟ್ರ, ಝಾರ್ಕಂಡ್ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಅಕ್ಟೋಬರಿನಲ್ಲಿ ಹರಿಯಾಣ, ಮಹಾರಾಷ್ಟ್ರ ಚುನಾವಣೆ, ಝಾರ್ಕಂಡಿನಲ್ಲಿ ಡಿಸೆಂಬರಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದು ಮಹಾರಾಷ್ಟ್ರ, ಹರಿಯಾಣಗಳ ಚುನಾವಣಾ ಫಲಿತಾಂಶ ದೀಪಾವಳಿಗೆ ಮೊದಲು ಪ್ರಕಟವಾಗಲಿದೆ ಎನ್ನಲಾಗಿದೆ. ಹನ್ನೊಂದು ಗಂಟೆಗೆ ಚುನಾವಣಾ ಆಯೋಗ ಸಭೆ ನಡೆಯಲಿದ್ದು ನಂತರ ನೀತಿ ಸಂಹಿತೆ ಈ ರಾಜ್ಯಗಳಲ್ಲಿ ಜಾರಿಗೆ ಬರಲಿದೆ.
ಗುರವಾರ ಚುನಾವಣಾ ಆಯೋಗ ಮಹಾರಾಷ್ಟ್ರ ಪರ್ಯಟನೆ ನಡೆಸಿತ್ತು. ಅಲ್ಲಿ ಚುನಾವಣಾ ಸಿದ್ಧತೆಗಳನ್ನು ಅವಲೋಕಿಸಿತ್ತು. ಆಯೋಗದ ಮೂಲಗಳು ತಿಳಿಸಿರುವಂತೆ ಮಹಾರಾಷ್ಟ್ರ ಪ್ರವಾಸದಿಂದ ಚುನಾವಣಾ ಆಯುಕ್ತರು ಗುರುವಾರ ತಡ ರಾತ್ರೆ ದಿಲ್ಲಿ ತಲುಪಿದ್ದರು. ನಂತರ ಚುನಾವಣಾ ತಯಾರಿಯ ಅಂತಿಮ ತಯಾರಿ ನಡೆಯುತ್ತಿದೆ. ಇಂದಿನ ಸಭೆಯ ನಂತರ ಚುನಾವಣಾ ಕಾರ್ಯಕ್ರಮ ಘೋಷಣೆಯಾಗಲಿದೆ. ಇಂದಿನ ಚುನಾವಣಾ ಪೂರ್ವ ಚುನಾವಣಾ ಆಯೋಗದ ಸಭೆಯಲ್ಲಿ ಇವಿಎಂ, ವಿವಿಪ್ಯಾಟ್ ಚರ್ಚೆ ನಡೆಯಲಿದೆ. ಮಹಾರಾಷ್ಟ್ರ, ಹರ್ಯಾಣ, ಝಾರ್ಕಂಡಿನಲ್ಲಿ ಬಿಜೆಪಿ ಸರಕಾರವಿದೆ.












