ಎರಡನೇ ಏಕದಿನ ಪಂದ್ಯ: ಭಾರತದ ವಿರುದ್ಧ ಇಂಗ್ಲೆಂಡ್ ಗೆ 6 ವಿಕೆಟ್ ಗಳ ಜಯ

0
4565

ಸನ್ಮಾರ್ಗ ಕ್ರೀಡಾಲೋಕ

ಪುಣೆ: ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಇಂದು ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧದ 6 ವಿಕೆಟ್ ಗಳ ಜಯಗಳಿಸುವ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಟೀಮ್ ಇಂಡಿಯಾ ನೀಡಿದ್ದ 337 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 43.3 ಓವರ್ ಗಳಲ್ಲಿ ಗುರಿ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇಂಗ್ಲೆಂಡ್ ಪರವಾಗಿ ಜಾಸನ್ ರಾಯ್ 55, ಬೆನ್ ಸ್ಟೋಕ್ಸ್ 99, ಜಾನಿ ಬೈರ್‌ಸ್ಟೋವ್ 124 ರನ್ ಗಳಿಸಿ ಮಿಂಚಿದರು.

ಪ್ರಸಿದ್ ಕೃಷ್ಣ ಎರಡು ವಿಕೆಟ್ ಗಳಿಸಿ ಬೌಲಿಂಗ್ ನಲ್ಲಿ ಭಾರತದ ಪರ ಮಿಂಚಿದರೆ, ಭುವನೇಶ್ವರ್ ಕುಮಾರ್ 1 ಪರ ವಿಕೆಟ್ ಪಡೆದಿದ್ದಾರೆ.

ಬ್ಯಾಟಿಂಗ್ ನಲ್ಲಿ ಟೀಮ್ ಇಂಡಿಯಾ ಪರ ಕೆ.ಎಲ್.ರಾಹುಲ್ ಒಂದು ಶತಕವನ್ನು ಬಾರಿಸಿದರು (114 ಎಸೆತಗಳಲ್ಲಿ 108). ಏತನ್ಮಧ್ಯೆ, ರಿಷಭ್ ಪಂತ್ (77) ಮತ್ತು ವಿರಾಟ್ ಕೊಹ್ಲಿ (66) ಕೂಡ ಅರ್ಧಶತಕಗಳನ್ನು ದಾಖಲಿಸಿದರು. ಇಂಗ್ಲೆಂಡ್ ಪರವಾಗಿ ರೀಸ್ ಟೋಪ್ಲಿ ಮತ್ತು ಟಾಮ್ ಕರ್ರನ್ ತಲಾ ಎರಡು ವಿಕೆಟ್ ಪಡೆದರು.