ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿಯಿಂದ ಸಂತ್ರಸ್ತೆಯ ಮೇಲೆ ಪುನಃ ಅತ್ಯಾಚಾರಕ್ಕೆ ಯತ್ನ: ಬಂಧನ

0
678

ಸನ್ಮಾರ್ಗ ವಾರ್ತೆ

ಕುಳತ್ತುಪುಯ : ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಯುವಕ ಪುನಃ ಅದೇ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಯುವಕನನ್ನು ಅಜಿತ್(22) ಎಂದು ಗುರುತಿಸಲಾಗಿದೆ. ಒಂಬತ್ತನೆ ತರಗತಿಯ ವಿದ್ಯಾರ್ಥಿನಿಯನ್ನು ವರ್ಷದ ಹಿಂದೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಳಿಕ ದೂರಿನ ಹಿನ್ನೆಲೆಯಲ್ಲಿ ಈತನನ್ನು ಕುಳತ್ತೂರ್ ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಅಜಿತ್‍ಗೆ ಮೂರು ತಿಂಗಳ ಹಿಂದೆ ಜಾಮೀನು ದೊರಕಿತ್ತು.

ನಿನ್ನೆ ಪುನಃ ಇದೇ ಹುಡುಗಿಯನ್ನು ಜನರಿಲ್ಲದ ವೇಳೆ ಸಂಬಂಧಿಕರ ಮನೆಗೆ ಬಂದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಸಮೀಪದ ಮನೆಯವರು ಪೊಲೀಸರಿಗೆ ವಿವರ ನೀಡಿದ್ದು, ಬಳಿಕ ಯುವಕನನ್ನು ಬಂಧಿಸಿದ್ದಾರೆ. ಆರೋಪಿ ಯುವಕನಿಗೆ ಕೋರ್ಟು ರಿಮಾಂಡ್ ವಿಧಿಸಿದೆ.