ಮುಂದಿನದು ಭೀಕರ ಆರ್ಥಿಕ ಬಿಕ್ಕಟ್ಟು: ವಿಶ್ವಬ್ಯಾಂಕ್

0
762

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ.18: ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಅರ್ಥವ್ಯವಸ್ಥೆಗೆ ತಟ್ಟುವ ಮಾಂದ್ಯ ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಪ್ರಭಾವ ಬೀರಬಹುದು ಎನ್ನುವ ವರದಿ ಬಹಿರಂಗವಾಗಿದೆ. ವಿಶ್ವಬ್ಯಾಂಕ್ ವರದಿಯಲ್ಲಿ ವಿಶ್ವವು 2007-2009ರ ಮಾಂದ್ಯಕ್ಕಿಂತಲೂ ಭೀಕರ ಸ್ಥಿತಿಗೆ ಹೋಗಲಿದೆ ಎಂದು ವರದಿ ತಿಳಿಸುತ್ತಿದೆ.

ಆರೋಗ್ಯ ಸಮಸ್ಯೆ, ಬಿಕ್ಕಟ್ಟು ಇವುಗಳ ಜೊತೆಗೆ ಅರ್ಥವ್ಯವಸ್ಥೆಯ ಅಧಃಪತನ ಕೊರನಾದಿಂದ ಜಗತ್ತನ್ನು ಕಾಡಲಿದೆ. ಉತ್ಪಾದನೆ, ಉದ್ಯೋಗ, ವ್ಯಾಪಾರ, ಹೂಡಿಕೆಗಳು ದೊಡ್ಡ ಬಿಕ್ಕಟ್ಟು ಎದುರಿಸುತ್ತಿವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಮಾಲ್ಪಸ್ ಹೇಳಿದರು. ಬಡ, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಬೆಂಬಲಿಸಲು ಈಗ ವಿಶ್ವ ಬ್ಯಾಂಕ್ ಶ್ರಮಿಸುತ್ತಿದೆ. ಬಡವರಿಗೆ, ಸಮಸ್ಯೆ ಎದುರಿಸುವವರಿಗೆ ನೆರವು ತಲುಪಿಸುವುದು ವಿಶ್ವ ಬ್ಯಾಂಕಿನ ಮೊದಲ ಗುರಿಯಾಗಿದೆ. ಉದ್ಯೋಗ, ಉದ್ಯಮ ರಕ್ಷಿಸುವುದು ವಿಶ್ವಬ್ಯಾಂಕಿನ ಘೋಷಿತ ಉದ್ದೇಶವೆಂದು ಮಾಲ್ಪಸ್ ಹೇಳಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.