ಸನ್ಮಾರ್ಗ ವಾರ್ತೆ
ಭೋಪಾಲ, ಎ. 18: ಲಾಕ್ ಡೌನ್‍ನಿಂದಾಗಿ ಮನೆಯಲ್ಲೇ ಒಂಟಿಯಾಗಿಬಿಟ್ಟಿದ್ದ 53 ವರ್ಷದ ಅಂಧ ಮಹಿಳೆಯನ್ನು ದುಷ್ಕರ್ಮಿ ಅತ್ಯಾಚಾರ ಮಾಡಿದ್ದಾನೆ. ಬ್ಯಾಂಕ್ ಅಧಿಕಾರಿಣಿಯಾಗಿರುವ ಈ ಅಂಧ ಮಹಿಳೆಯು ಲಾಕ್ ಡೌನ್‍ನಿಂದ ಒಂಟಿಯಾಗಿದ್ದರು. ಅವರ ಪತಿ ರಾಜಸ್ಥಾನದಲ್ಲಿ ಲಾಕ್ ಡೌನ್‍ನಿಂದಾಗಿ ಸಿಕ್ಕಿಬಿದ್ದಿದ್ದರು. ಮನೆಯೊಳಗೆ ದುಷ್ಕರ್ಮಿ ಬಾಲ್ಕನಿ ಮೂಲಕ ಬಂದಿದ್ದಾನೆ. ಮಹಿಳೆಯಿಂದ ಫೋನ್ ಕಿತ್ತುಕೊಂಡ ಬಳಿಕ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಮಹಿಳೆ ಅಳುವುದು ಕೇಳಿ ಸಮೀಪದ ಮನೆಯವರು ಬಾಗಿಲು ತೆರದು ಒಳಗೆ ಬಂದಾಗ ದುಷ್ಕರ್ಮಿ ಓಡಿ ಹೋಗಿ ತಪ್ಪಿಸಿಕೊಂಡ ಎಂದು ಪೊಲೀಸರು ತಿಳಿಸಿದರು.
ಘಟನೆಯ ನಂತರ ಪತಿಯನ್ನು ಪೊಲೀಸರ ವಿಶೇಷ ಅನುಮತಿಯಲ್ಲಿ ಮನೆಗೆ ಕರೆತರಲಾಗಿದೆ. ವಿಪರೀತ ಸೆಕೆಯಿತ್ತು. ಆದ್ದರಿಂದ ಮಹಿಳೆ ಕಿಟಕಿ ಬಾಗಿಲು ತೆರೆದಿಟ್ಟಿದ್ದರು. ಕಿಟಕಿ ಮೂಲಕ ದುಷ್ಕರ್ಮಿ ಒಳಗೆ ಬಂದಿದ್ದ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












