ಕೇಂದ್ರ ಸರಕಾರದೊಂದಿಗೆ ಇಂದು ಚರ್ಚೆ: ರೈತರ ಅಜೆಂಡಾದಲ್ಲಿ ಬದಲಾವಣೆ ಇಲ್ಲ

0
466

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ. 30: ಸರಕಾರದೊಂದಿಗೆ ಬುಧವಾರ ಮಧ್ಯಾಹ್ನ ಎರಡನೇ ಹಂತದ ರೈತರ ಚರ್ಚೆ ನಡೆಯಲಿದ್ದು ತಮ್ಮ ಅಜೆಂಡಾದಲ್ಲಿ ಬದಲಾವಣೆಗಳಿಲ್ಲ ಎಂದು ರೈತರು ಹೇಳಿದ್ದಾರೆ. ಈ ವಿಷಯದಲ್ಲಿ ರೈತ ಸಂಘಟನೆಗಳು ಸರಕಾರಕ್ಕೆ ಪತ್ರ ಬರೆದಿದೆ. ಮೂರುವ ವಿವಾದ ಕೃಷಿ ಕಾನೂನುಗಳನ್ನು ವಾಪಸು ಪಡೆಯಬೇಕು.ಬೆಂಬಲ ಬೆಲೆಗೆ ಕಾನೂನು ಮಾಡಬೇಕು. ಇತ್ಯಾದಿ ಬೇಡಿಕೆಗಳನ್ನು ರೈತರು ಸರಕಾರದ ಮುಂದೆ ಇಟ್ಟಿದ್ದಾರೆ. ಚರ್ಚೆಯ ಅಜೆಂಡಾ ನಿರ್ಧರಿಸುವುದಕ್ಕಾಗಿ ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇಂಧನ ಸಚಿವ ಪಿಯೂಷ್ ಗೋಯಲ್ ಮುಂತಾದವರೊಂದಿಗೆ ಚರ್ಚೆ ನಡೆಸಿದ್ದಾರೆ.

ಐದು ಬಾರಿ ಚರ್ಚೆ ನಡೆದಿದ್ದು ಕಾನೂನು ಹಿಂಪಡೆಯುವುದಿಲ್ಲ ಎಂದು ಸರಕಾರ ಹೇಳಿತ್ತು. ಅದರ ನಂತರ ನಾವು ಚರ್ಚೆಗೆ ಸಿದ್ಧರಿದ್ದೇವೆ ಆದರೆ ರೈತರು ಚರ್ಚೆಗೆ ಬರುವುದಿಲ್ಲ ಎಂದು ಸರಕಾರ ವ್ಯಾಪಕ ಪ್ರಚಾರ ಮಾಡಿತ್ತು. ಆದ್ದರಿಂದ ಶರ್ತಗಳೊಂದಿಗೆ ರೈತರು ಚರ್ಚೆ ಪುನರಾರಂಭಿಸಲು ತೀರ್ಮಾನಿಸಿದ್ದಾರೆ.

ಕೃಷಿ ಕಾನೂನಿನಿಂದ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಸಚಿವರು ಪುನರುಚ್ಚರಿಸುತ್ತಿದ್ದಾರೆ. ಆದ್ದರಿಂದ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ತಿಳಿಸಿದೆ. ಬುಧವಾರ ಸಭೆಯಲ್ಲಿ ಸರಕಾರ ಅಜೆಂಡಾಕ್ಕೆ ಅಂತಿಮ ರೂಪ ನೀಡಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ರೈತರಿಗಾಗಿ ಜನವರಿಯಲ್ಲಿ ಸತ್ಯಾಗ್ರಹ ಮಾಡುವೆ ಎಂದು ಅಣ್ಣ ಹಝಾರೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ. ಪಾಟ್ನದಲ್ಲಿ ವಿವಿಧ ರೈತರ ಸಂಘಟನೆಗಳ ನೇತೃತ್ವದಲ್ಲಿ ರಾಜ ಭವನ್ ಮಾರ್ಚ್ ನಡೆದಿತ್ತು. ಪೊಲೀಸರು ಲಾಠಿ ಚಾರ್ಜ್ ಮಾಡಿ ರೈತರನ್ನು ಚದುರಿಸಿದ್ದಾರೆ.