ಎಸ್.ಐ.ಓ ಉಡುಪಿ ನೂತನ ಜಿಲ್ಲಾಧ್ಯಕ್ಷರಾಗಿ ಅರ್ಬಾಝ್ ಆಯ್ಕೆ

0
441

ಸನ್ಮಾರ್ಗ ವಾರ್ತೆ

ಉಡುಪಿ: ಆದರ್ಶ್ ಸೆಂಟರ್ ಹೂಡೆಯಲ್ಲಿ ನಡೆದ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಎಸ್.ಐ.ಓ ಉಡುಪಿ ಜಿಲ್ಲಾಧ್ಯಕ್ಷರಾಗಿ ಅರ್ಬಾಝ್ ಅವರನ್ನು ಆಯ್ಕೆ ಮಾಡಲಾಯಿತು.

ಇವರು ಇಂಜಿನಿಯರ್ ಪದವೀಧರರಾಗಿದ್ದು, ಪ್ರಸ್ತುತ ಮಣಿಪಾಲದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲಾ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಹೂಡೆಯ ಅಸ್ಜದ್ ಅವರನ್ನು ಆಯ್ಕೆ ಮಾಡಲಾಯಿತು.

ಹೂಡೆಯ ಘಟಕಾಧ್ಯಕ್ಷರಾಗಿ ವಸೀಮ್ ಅಬ್ದುಲ್ಲಾ, ಕಾರ್ಯದರ್ಶಿಯಾಗಿ ಫೈಸಲ್ ನಕ್ವಾ,
ಮಲ್ಪೆಯ ಘಟಕಾಧ್ಯಕ್ಷರಾಗಿ ಆಯಾನ್ ಮಲ್ಪೆ, ಕಾರ್ಯದರ್ಶಿಯಾಗಿ ನೌಫಲ್ ಮಲ್ಪೆ ಹಾಗೂ
ಉಡುಪಿ ಘಟಕಾಧ್ಯಕ್ಷರಾಗಿ ಯಾಸೀನ್ ಮನ್ನಾ ಮತ್ತು ಕಾರ್ಯದರ್ಶಿಯಾಗಿ ರೈಹಾನ್ ರವರನ್ನು ಆಯ್ಕೆ ಮಾಡಲಾಯಿತು.