ಟ್ರ್ಯಾಕ್ಟರ್ ರ‌್ಯಾಲಿ ಹಿಂಸಾಚಾರ: ರೈತ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸ್

0
341

ಸನ್ಮಾರ್ಗ ವಾರ್ತೆ

ನವದೆಹಲಿ: ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ದ ಎಫ್ ಐಆರ್ ದಾಖಲಿಸಿದ್ದಾರೆ.

ಈ ಬಗ್ಗೆ ದೆಹಲಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ರೈತ ಮುಖಂಡರಾದ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ , ದರ್ಶನ್ ಪಾಲ್, ಗುರ್ನಮ್ ಸಿಂಗ್ ಚಾಂದೂನಿ, ರಾಕೇಶ್ ಟಿಕೈಟ್, ಕುಲ್ವಂತ್ ಸಿಂಗ್ ಸಂಧು, ಸತ್ನಮ್ ಸಿಂಗ್ ಪನ್ನು, ಜೋಗಿಂದರ್ ಸಿಂಗ್ ಉಗ್ರಾಹಾ, ಸುರ್ಜೀತ್ ಸಿಂಗ್ ಫೂಲ್, ಜಗ್ಜೀತ್ ಸಿಂಗ್ ದಲೆವಾಲ್, ಹಲ್ಬಿಂದರ್ ಸಿಂಗ್ ರಾಜೇವಾಲ್ ಲಖೋವಲ್ ಸೇರಿದಂತೆ ಒಟ್ಟು 37 ಮಂದಿ ರೈತ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಗಲಭೆ, ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನದ ಆರೋಪಗಳ ಅಡಿಯಲ್ಲಿ ರೈತ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಹಿಂಸಾಚಾರದಲ್ಲಿ 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರೆ, 30 ಪೊಲೀಸ್ ವಾಹನಗಳು ಮತ್ತು 428 ಬ್ಯಾರಿಕೇಡ್‌ಗಳು ಹಾನಿಗೊಳಗಾಗಿವೆ ಎಂಬುದಾಗಿ ವರದಿಯಾಗಿದ್ದು, ಪೊಲೀಸರ ಬಳಿ ಇದ್ದ ಅಧಿಕೃತ ಪಿಸ್ತೂಲ್ ಅನ್ನು ಬಳಕೆ ಮಾಡಿದ್ದು ಒಟ್ಟು 10 ಸುತ್ತಿನ ಮದ್ದುಗುಂಡು ಮತ್ತು ಎರಡು ಅಶ್ರುವಾಯು ಬಂದೂಕುಗಳನ್ನು ದೋಚಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.