ರೈತರ ಹೋರಾಟಕ್ಕೆ ಇಂದಿಗೆ ಏಳು ತಿಂಗಳು: ಇಂದು ‘ಸೇವ್ ಅಗ್ರಿಕಲ್ಚರ್, ಸೇವ್ ಡೆಮಾಕ್ರಸಿ ದಿನ’ ವಾಗಿ ಆಚರಣೆ

0
502

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತ ಹೋರಾಟಕ್ಕೆ ಶನಿವಾರದಂದು ಏಳು ತಿಂಗಳು ತುಂಬಿದ್ದು 2020 ನವೆಂಬರಿನಲ್ಲಿ ಮೂರು ಕೃಷಿ ಕಾನೂನನ್ನು ಹಿಂಪಡೆಯಬೇಕೆಂದು ರೈತ ಸಮೂಹದಿಂದ ಭಾರತದಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿ ಹೋರಾಟ ಆರಂಭವಾಗಿತ್ತು.

ಹೋರಾಟಕ್ಕೆ ಏಳು ತಿಂಗಳಾಗುತ್ತಿರುವ ವೇಳೆ ಶನಿವಾರ ರೈತರ ನೇತೃತ್ವದಲ್ಲಿ ಸೇವ್ ಅಗ್ರಿಕಲ್ಚರ್, ಸೇವ್ ಡೆಮಾಕ್ರಸಿ ದಿನ ಆಚರಿಸಲಾಗುತ್ತಿದೆ.

ಸಿಂಘು, ಟಿಕ್ರಿ, ಗಾಝಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನೇತೃತ್ವದಲ್ಲಿ ದಿನಾಚರಣೆ ನಡೆಯುತ್ತದೆ ಎಂದು ಕಿಸಾನ್ ಮೋರ್ಚಾ ತಿಳಿಸಿದೆ.

ರಾಜಸ್ಥಾನದ ಗಂಗಾ ನಗರದಿಂದ ಶಾಜಹಾನ್ ಪುರ ಗಡಿಗೆ ಗ್ರಾಮೀಣ ಕಿಸಾನ್ ಮಝ್ದೂರ್ ಸಮಿತಿಯ ನೇತೃತ್ವದಲ್ಲಿ ರೈತರು ಹೊರಟ್ಟಿದ್ದು ಮತ್ತು ಗಾಝಿಪುರ ಗಡಿಗೆ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಭಾಗ್‍ಪತ್, ಸಹರನಾಪುರಗಳಿಗೆ ರೈತರು ಬರುತ್ತಾರೆ ಎಂದು ರೈತರು ಹೇಳಿದ್ದಾರೆ.

ದೇಶಾದ್ಯಂತ ರೈತ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಲಿದೆ. ಬಿಜೆಪಿ ನಾಯಕರಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಕಪ್ಪು ಧ್ವಜ ತೋರಿಸಲಾಗುವುದು ಎಂದು ರೈತರು ಹೇಳಿದ್ದಾರೆ.‌

ಕಳೆದ ವರ್ಷ ನವೆಂಬರಿನಲ್ಲಿ ದಿಲ್ಲಿಯ ಗಡಿಗೆ ಬಂದು ಪಂಜಾಬ್, ಹರಿಯಾಣ, ರಾಜಸ್ಥಾನ ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದು, ಹೋರಾಟ ನಿರತ 502 ರೈತರು ಏಳು ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.