ಫತ್ಮ ಅಲ್ ನುಹೈಮಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ

0
194

ಸನ್ಮಾರ್ಗ ವಾರ್ತೆ

ದೋಹಾ; ಕತಾರಿನ ಫತ್ಮ ಅಲ್ ನುಹೈಮಿ ಅವರಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ ಲಭಿಸಿದೆ. ಇವರು ಕತಾರ್ ನ ಸುಪ್ರೀಂ ಕಮಿಟಿ ಫಾರ್ ಡೆಲಿವರಿ ಅಂಡ್ ಲೆಗಸಿ ಕಮ್ಯುನಿಕೇಷನ್ ಅಂಡ್ ಮೀಡಿಯಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿದ್ದಾರೆ.

ದಾವೋಸಿನಲ್ಲಿ ವರ್ಲ್ಡ್ ವುಮೆನ್ ಫೌಂಡೇಶನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಫತ್ಮ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಈ ಸಭೆಯಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಯಶಸ್ಸಿನಲ್ಲಿ ಮಹಿಳೆಯರು ನಿರ್ವಹಿಸಿದ ಪಾತ್ರವನ್ನು ಪ್ರಶಂಶಿಸಲಾಗಿದೆ. ಈ ಸಭೆಯಲ್ಲಿ ವಿಶ್ವಕಪ್ ಫುಟ್ಬಾಲ್ ಗೆ ಸಂಬಂಧಿಸಿ ಮತ್ತು ಮಹಿಳೆಯರ ಪಾತ್ರಕ್ಕೆ ಸಂಬಂಧಿಸಿದಂತೆ ಫತ್ಮ ಮಾತಾಡಿದರು.