ನ. 28: ಕುವೈಟ್‌ನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

0
5

ಸನ್ಮಾರ್ಗ ವಾರ್ತೆ

ಕುವೈಟಿನಲ್ಲಿ ನವಂಬರ್ 28ರ ಶನಿವಾರದಂದು ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಕುವೈಟಿನ ಎಲ್ಲಾ ಗವರ್ನರೇಟ್ ಗಳ ಉದ್ದಕ್ಕೂ 108 ಮಸೀದಿಗಳಲ್ಲಿ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಈ ಪ್ರಾರ್ಥನೆ ನಡೆಯಲಿದೆ. ಮಳೆಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸುವ ಪ್ರವಾದಿಯ ಪದ್ದತಿಯನ್ನು ಅನುಸರಿಸಿ ಇಮಾಮರು ಮತ್ತು ವಿದ್ವಾಂಸರು ಪ್ರಾರ್ಥನೆಗಳನ್ನು ಮುನ್ನಡೆಸಬೇಕು ಎಂದು ಔಕಾಫ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಸಚಿವಾಲಯದ ಅಧೀನ ಕಾರ್ಯದರ್ಶಿ ಡಾಕ್ಟರ್ ಎಂಜಿನಿಯರ್ ಸುಲೈಮಾನ್ ಅಲ್ ಸುವೈಲಂ ಅವರು ಪ್ರಾರ್ಥನೆ ನಡೆಯುವ ಮಸೀದಿಗಳ ಹೆಸರುಗಳನ್ನು ಒಳಗೊಂಡ ಸುತ್ತೋಲೆಯನ್ನು ಹೊರಡಿಸಿದ್ದಾರೆ. ನಾಗರಿಕರು ಮತ್ತು ಕುವೈಟ್ ನಿವಾಸಿಗಳು ಈ ಪ್ರಾರ್ಥನೆಯಲ್ಲಿ ಮಸೀದಿಯಲ್ಲಿ ಹಾಜರಾಗುವಂತೆ ವಿನಂತಿಸಲಾಗಿದೆ. ತಮ್ಮ ಹತ್ತಿರದ ಮಸೀದಿಯನ್ನು ಹುಡುಕಲು ಸಹಾಯಕವಾಗುವಂತೆ ಮಸೀದಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.