ಗಾಝದ ಅರ್ಹ ಕುಟುಂಬಗಳಿಗೆ ಕತಾರ್‌ನಿಂದ ಆರ್ಥಿಕ ಸಹಾಯ

0
391

ಸನ್ಮಾರ್ಗ ವಾರ್ತೆ

ದೋಹ,ಅ.7: ಕತಾರ್‌ನ ಮೇಲ್ನೋಟದಲ್ಲಿ ಫೆಲಸ್ತೀನಿನ ಗಾಝದ ಅರ್ಹ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಕಳೆದ ದಿವಸ ವಿತರಿಸಲಾಗಿದೆ. ಗಾಝ ಮರುನಿರ್ಮಾಣದ ಕತಾರ್ ಸಮಿತಿ ಅಧ್ಯಕ್ಷ ರಾಯಭಾರಿ ಮುಹಮ್ಮದ್ ಅಲ್ ಇಮಾದ್ ಈ ವಿಷಯವನ್ನು ತಿಳಿಸಿದ್ದಾರೆ. ಕತಾರ್ ಡೆವಲಪ್ಮೆಂಟ್ ಫಂಡ್(ಕ್ಯೂಎಫ್‍ಎಫ್‍ಡಿ)ನೊಂದಿಗೆ ಸಹಕರಿಸಿ ಅರ್ಹ ಒಂದು ಲಕ್ಷ ಕುಟುಂಬಗಳಿಗೆ ತಲಾ 100ಡಾಲರ್ ಸಹಾಯಧನ ವಿತರಿಸಲಾಗಿದೆ.

ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಮೇಲ್ನೋಟದಲ್ಲಿರುವ ವಿಶೇಷ ಸಮಿತಿಯ ಅಧೀನದಲ್ಲಿ ಆರ್ಥಿಕ ಸಹಾಯ ವಿತರಣೆ ನಡೆಯಲಿದೆ ಎಂದು ಈ ಹಿಂದೆ ಅಲ್ ಇಮಾದಿ ತಿಳಿಸಿದ್ದರು. ಒಂದು ಲಕ್ಷ ಕುಟುಂಬಗಳಿಗೆ ಆರ್ಥಿಕ ಸಹಾಯ ವಿತರಿಸಿದ ಬಳಿಕ ಕೊರೊನದಿಂದ ಸಂಕಷ್ಟಕ್ಕೊಳಗಾಗಿರುವ ಸಾಮಾಜಿಕ ಅಭಿವೃದ್ಧಿ ಸಚಿವಾಲಯದಲ್ಲಿ ನೋಂದಾಯಿತ 70,000 ಕುಟುಂಬಳಿಗೂ ತಲಾ ನೂರು ಡಾಲರ್ ವಿತರಣೆ ಮಡಲಾಗುವುದು ಎಂದು ಅಲ್ ಇಮಾದಿ ಹೇಳಿದ್ದಾರೆ. ಕೊರೋನದ ಹಿನ್ನೆಲೆಯಲ್ಲಿ ಫಲಾನುಭವಿಗಳ ಆರೋಗ್ಯ ಸುರಕ್ಷೆಯನ್ನು ಪರಿಗಣಿಸಿ ಸಾಕಷ್ಟು ಸುರಕ್ಷೆ, ಮುನ್ನೆಚ್ಚರಿಕೆಯೊಂದಿಗೆ ಗಾಝಕ್ಕೆ ಸಂಬಂಧಿಸಿದ ಸರಕಾರದ ಇಲಾಖೆಗಳೊಂದಿಗೆ ಸಹಕರಿಸಿ ಹಣ ವಿತರಣೆ ಕಾರ್ಯ ನಡೆಯಿತು.