ಲೈಸನ್ಸ್ ಪಡೆಯದಿದ್ದರೆ ಭಾರೀ ಮೊತ್ತದ ದಂಡ: ಖಾಸಗಿ ಹಾಸ್ಟೆಲ್‌ಗಳಿಗೆ ಎಚ್ಚರಿಕೆ

0
94

ಸನ್ಮಾರ್ಗ ವಾರ್ತೆ

ಮಂಗಳೂರು:- ಜಿಲ್ಲೆಯ ನಗರಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾ ಸಂಸ್ಥೆಗಳು ಮತ್ತು ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಹೊಸ ಖಾಸಗಿ ವಸತಿ ನಿಲಯಗಳು ಪರವಾನಿಗೆ ಪಡೆಯದೇ ಉದ್ದಿಮೆ ನಡೆಸುತ್ತಿರುವುದು ಹಾಗೂ ಕೆಲವು ಖಾಸಗಿ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಲಭ್ಯತೆ ಹಾಗೂ ಶುಚಿತ್ವ ಇಲ್ಲದಿರುವುದು ಕಂಡು ಬಂದಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಪರವಾನಿಗೆ ಪಡೆಯದೇ ಉದ್ದಿಮೆ ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳು 15 ದಿನಗಳೊಳಗಾಗಿ ನಗರ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆದುಕೊಳ್ಳಬೇಕು.

ಇಲ್ಲವಾದಲ್ಲಿ ಸ್ಥಳೀಯ ಸಂಸ್ಥೆಗಳಿಂದ ತಮ್ಮ ಖಾಸಗಿ ವಸತಿ ನಿಲಯಗಳನ್ನು ರದ್ದುಗೊಳಿಸಲು ಕಾನೂನು ಕ್ರಮವಹಿಸಲಾಗುವುದು ಹಾಗೂ ಸ್ಥಳೀಯ ಸಂಸ್ಥೆ ವಿಧಿಸುವ ಭಾರಿ ಮೊತ್ತದ ದಂಡವನ್ನು ಭರಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.