ದುಬೈಯಿಂದ ಇಸ್ರೇಲ್‌ಗೆ ಹಾರುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ: ಭಯೋತ್ಪಾದಕ ದಾಳಿಯ ಶಂಕೆ

0
276

ಸನ್ಮಾರ್ಗ ವಾರ್ತೆ

ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹಾರುತಿದ್ದ ಫ್ಲೈ ದುಬೈ ವಿಮಾನವು ಪೈಲೆಟ್ ಗಳ ನಡುವಿನ ವಿವಾದದ ನಂತರ ಸೌದಿ ಅರೇಬಿಯಾದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳು ಹಿಂಸಾತ್ಮಕ ವರ್ತನೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ವಿಮಾನವನ್ನು ಪತನಗೊಳಿಸಲು ಪೈಲೆಟ್ ಯತ್ನಿಸಿದಾಗ ಸಹ ಪೈಲೆಟ್ ಪ್ರಯಾಣಿಕರ ಸಹಾಯದಿಂದ ಅದನ್ನು ತಡೆದರು ಎಂದು ಹೇಳಲಾಗುತ್ತಿದೆ. ರಕ್ತದಲ್ಲಿ ಮುಳುಗಿರುವ ಪ್ರಯಾಣಿಕನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವಿಮಾನದಲ್ಲಿ ನಡೆದ ಘಟನೆಯು ಪೈಲೆಟ್ ಗಳಲ್ಲಿ ಒಬ್ಬರ ನೇತೃತ್ವದಲ್ಲಿ ನಡೆದ ಭಯೋತ್ಪಾದಕ ದಾಳಿ ಆಗಿರಬಹುದು ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ. ಆರಂಭಿಕ ವರದಿಗಳ ಪ್ರಕಾರ ಈ ಘಟನೆ ಅಪಹರಣವಲ್ಲ ಮತ್ತು ಪೈಲೆಟ್ಗಳ ನಡುವಿನ ದೈಹಿಕಘರ್ಷಣೆಯ ನಂತರ ತುರ್ತು ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಸೂಚಿಸಿವೆ. ಆದರೆ ಅಧಿಕಾರಿಗಳು ಈಗ ಈ ಘಟನೆಯು ಭಯೋತ್ಪಾದಕ ದಾಳಿ ಆಗಿರಬಹುದು ಎಂದು ಶಂಕಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ವಿಮಾನದ ಸಹ ಪೈಲೆಟ್ ನಾಯಕನಿಗೆ ಇರಿದಿದ್ದಾನೆ. ಆಗ ಇಬ್ಬರು ಪ್ರಯಾಣಿಕ ಪೈಲೆಟ್ಗಳು ದಾಳಿಕೋರನ ಮೇಲೆ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ ಮತ್ತು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಮಾನವು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ವಿಮಾನದಲ್ಲಿ 180 ಪ್ರಯಾಣಿಕರಿದ್ದರು.