ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು ರಾಷ್ಟ್ರ ಲಾಂಛನಕ್ಕೆ ಮಾಡಿದ ಅವಮಾನ : ಎಸ್. ಐ. ಓ

0
208

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲೆಯ ವಲಚ್ಚಿಲ್ ಶ್ರೀನಿವಾಸ ಕಾಲೇಜಿನ ಆವರಣದ ರಾಷ್ಟ್ರ ಲಾಂಛನವಿರುವ ಧ್ವಜ ಸ್ಥಂಭದಲ್ಲಿ ಕೋಮು ಮನಸ್ಥಿತಿಯ ಕಿಡಿಗೇಡಿಗಳು ಕೇಸರಿ ಧ್ವಜವನ್ನು ಹಾರಿಸಿದ ಘಟನೆಯು ಬೆಳಕಿಗೆ ಬಂದಿದ್ದು, ಇದು ರಾಷ್ಟ್ರ ಲಾಂಛನಕ್ಕೆ ಮಾಡಿದ ಅವಮಾನವಾಗಿದೆ. ಈ ರೀತಿಯ ಕುಕೃತ್ಯಗಳು ದೇಶದ ಜಾತ್ಯತೀತ ಅಸ್ಮಿತೆಗೆ ಮಾಡಿದ ದಾಳಿಯಾಗಿದ್ದು, ಸಂವಿಧಾನಕ್ಕೆ ಬದ್ದವಾಗಿರುವ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದರ ಹೊರತಾಗಿ ಇಂತಹ ಘಟನೆಗಳು ಸಮಾಜದಲ್ಲಿ ಕಾನೂನಿಗೆ ಬೆಲೆಯಿಲ್ಲದ ವಾತಾವರಣವನ್ನು ಸೃಷ್ಟಿಸುತ್ತವೆ.

ಈ ಘಟನೆ ಕರ್ನಾಟಕದಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಈ ಕೃತ್ಯವು ಸಂವಿಧಾನ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಚಿಹ್ನೆಗಳನ್ನು ಗೌರವಿಸಲು ಮತ್ತು ರಾಷ್ಟ್ರದಲ್ಲಿ ಏಕತೆಯನ್ನು ಹೆಚ್ಚಿಸಲು ಕೆಲಸ ಮಾಡಲು ಕಲಿಯಬೇಕಾಗಿದೆ.

ಆದರೆ ಇಲ್ಲಿ ನಡೆದಿರುವ ಘಟನೆ ಅದಕ್ಕೆ ತೀರಾ ವಿರುದ್ಧವಾದಂತಹದ್ದು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರಕಾರ ಶ್ರೀನಿವಾಸ ಕಾಲೇಜು ಹಾಗೂ ತಪ್ಪಿತಸ್ಥ ಕಿಡಿಗೇಡಿಗಳ ವಿರುಧ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಏಸ್ ಐ ಓ ದಕ್ಷಿಣ ಕನ್ನಡ ಘಟಕವು ಆಗ್ರಹಿಸುತ್ತದೆ.