ಶಿಕ್ಷಕರಿಗೆ ಘೋಷಿಸಿದ ಪರಿಹಾರ ಧನವನ್ನು ಸರಕಾರ ಶೀಘ್ರವಾಗಿ ಬಿಡುಗಡೆಗೊಳಿಸಲು ಮುಂದಾಗಬೇಕು: FMEII ಆಗ್ರಹ

0
233

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕ ಸರಕಾರವು ಖಾಸಗಿ ಹಾಗೂ ಅನುದಾನ ರಹಿತ ಶಿಕ್ಷಕರಿಗೆ ಘೋಷಿಸಿರುವ ರೂ.5000 ಪರಿಹಾರ ಘೋಷಣೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.‌ ಸರಕಾರವು ತಡಮಾಡದೇ ಈ ಕೂಡಲೆ ಈ ನಿಧಿಯನ್ನು ಶಿಕ್ಷಕರಿಗೆ ತಲುಪುವಂತೆ ಮಾಡಬೇಕು ಎಂದು ಫೆಡರೇಶನ್ ಆಫ್ ಮುಸ್ಲಿಮ್ ಎಜುಕೇಶನಲ್ ಇನ್ಸಿಟಿಟ್ಯೋಶನ್ ಕರ್ನಾಟಕ (ಫೇಮಿ) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸೀಫುದ್ದೀನ್ ಬೀದರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ಕೆಲಸವಿಲ್ಲದೇ ನಿರುದ್ಯೋಗದ ಸಮಸ್ಯೆಯಲ್ಲಿ ಸಿಲುಕಿ ಪರದಾಡುತ್ತಿರುವುದು ಒಂದೆಡೆಯಾದರೆ ದಿನ ಬಳಕೆ ಸಾಮಾನುಗಳ ಬೆಲೆ ಏರಿಕೆಯ ಕಷ್ಟವು ಇನ್ನೊಂದೆಡೆಯಾಗಿದೆ.

ಶಿಕ್ಷಕ ವರ್ಗ ಸದ್ಯ ಅನುಭವಿಸುತ್ತಿರುವ ಬದುಕು ದುಸ್ಥರವಾಗಿದ್ದು ಸರಕಾರ ಪ್ರಸಕ್ತ ಸನ್ನಿವೇಶವನ್ನು ಗಮನದಲ್ಲಿಟ್ಟು ಈ ಮೊತ್ತವನ್ನು ಕನಿಷ್ಟ ಮೂರು ತಿಂಗಳ ಒಳಗಾದರೂ ಬಿಡುಗಡೆ ಮಾಡಿ ಅವರ ಕಷ್ಟಕಾಲದಲ್ಲಿ ಉಪಯೋಗವಾಗುವಂತೆ ನೀಡಬೇಕೆಂದು ಅವರು ಆಗ್ರಹಪಡಿಸಿದ್ದಾರೆ.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಿಕ್ಷಣ ಸಚಿವರು ಪಿ.ಯು ಪರೀಕ್ಷೆಯನ್ನು ರದ್ದುಗೊಳಿಸಿರುವ ಕ್ರಮವನ್ನೂ ಸ್ವಾಗತಿಸುತ್ತೇವೆ. ಅದೇ ರೀತಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನೂ ಕೂಡ ಸರಕಾರವು ಮಕ್ಕಳ ಹಿತದೃಷ್ಟಿಯಿಂದ ರದ್ದುಗೊಳಿಸಿ ಮುಂದಿನ ತರಗತಿಗೆ ತೆರ್ಗೆಡೆಗೊಳಿಸಬೇಕೆಂದು ಆಸೀಫುದ್ದೀನ್ ಒತ್ತಾಯಿಸಿದ್ದಾರೆ.

ಇದಲ್ಲದೇ ಕೇಂದ್ರ ಸರಕಾರವು ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ದುಡಿಯುವವರಿಗೆ ಬಡ್ಡಿ ರಹಿತ ಸಾಲ ನೀಡಿದಂತೆ ಕಳೆದ ವರ್ಷದ ಆಡಿಟ್ ವರದಿಯನ್ನು ಮುಂದಿಟ್ಟುಕೊಡು ಅತ್ಯಂತ ಕಷ್ಟದಲ್ಲಿರುವಂತಹ ಖಾಸಗಿ ಶಾಲಾ ಆಡಳಿತ ಮಂಡಳಿಗೂ ಬಡ್ಡಿ ರಹಿತ ಸಾಲವನ್ನು ಕೊಟ್ಟು ಅವರಿಗೂ ಬದುಕುವ ಅವಕಾಶವನ್ನು ನೀಡಬೇಕು, ಅದಲ್ಲದೇ ಸರಕಾರವು ಇಂತಹ ಶಿಕ್ಷಣ ಸಂಸ್ಥೆಗಳ ವಿದ್ಯುತ್ ಬಿಲ್‌ನ ಮೊತ್ತದಲ್ಲಿ ಕೆಲವು ತಿಂಗಳಿಗಾದರೂ ಶೆ. 50% ಕಡಿಮೆಗೊಳಿಸಬೇಕೆಂದು ಈ ಮೂಲಕ ಫೆಡರೇಶನ್ ಆಫ್ ಮುಸ್ಲಿಮ್ ಎಜುಕೇಶನಲ್ ಇನ್ಸಿಟಿಟ್ಯೋಶನ್ ಕರ್ನಾಟಕ (ಫೇಮಿ) ಸರಕಾರಕ್ಕೆ ಆಗ್ರಹಿಸಿದೆ.

LEAVE A REPLY

Please enter your comment!
Please enter your name here