ಅರ್ನಬ್‍ರೊಂದಿಗಿನ ವಾಟ್ಸಪ್ ಚ್ಯಾಟ್ ಬಹಿರಂಗವಾದ ಬೆನ್ನಿಗೆ ಮಾಜಿ ಬಾರ್ಕ್ ಸಿಇಒ ಆಸ್ಪತ್ರೆಗೆ ದಾಖಲು

0
307

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.16: ಟಿಆರ್‌ಪಿ ವಂಚನೆ ಕೇಸಿಗೆ ಸಂಬಂಧಿಸಿ ಬಂಧನಕ್ಕೊಳಗಾದ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಾರ್ಕ್)ಮಾಜಿ ಸಿಇಒ ಪರ್ತೊ ದಾಸ್ ಗುಪ್ತ ರಕ್ತದೊತ್ತಡ, ರಕ್ತದ ಸಕ್ಕರೆ ಅಂಶ ಕೊರತೆಯಿಂದಾದ ತೊಂದರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಒಂದು ಗಂಟೆಗೆ ದಾಸ್‍ ಗುಪ್ತರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಕ್ರಿಯಿಸುವ ಶಕ್ತಿ ಸಂಪೂರ್ಣ ಕಳೆದುಕೊಂಡಿದ್ದು ಅವರು ಐಸಿಯುನಲ್ಲಿದ್ದಾರೆ. ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಪಾರ್ತೊದಾಸ್‍ರ ನಡುವಿನ ವಾಟ್ಸಪ್ ಚ್ಯಾಟ್‍ಗಳು ಬಹಿರಂಗವಾಗಿತ್ತು.

ಡಿಸೆಂಬರ್ 24ಕ್ಕೆ ಅವರನ್ನು ಬಂಧಿಸಲಾಗಿತ್ತು. ತಲೋಜ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಟಿಆರ್‌ಪಿ ಹಗರಣದ ಮುಖ್ಯ ಸೂತ್ರಧಾರನೆಂದು ಮುಂಬೈಲಿ ಪೊಲೀಸರು ಪತ್ತೆಹಚ್ಚಿದ್ದರು. ಡಿಸೆಂಬರ್ 31ಕ್ಕೆ ಪೊಲೀಸ್ ಕಸ್ಟಡಿ ಕೊನೆಗೊಂಡೊಡನೆ ನವಿಮುಂಬೈಯ ತಲೊಜ ಜೈಲಿನಲ್ಲಿ ಜ್ಯುಡಿಶಿಯಲ್ ಕಸ್ಟಡಿಯಲ್ಲಿರಿಸಲಾಗಿತ್ತು. ಅವರಿಗೆ ಮುಂಬೈಕೋರ್ಟು ಜಮೀನು ನಿರಾಕರಿಸಿತ್ತು. ಅರ್ನಾಬ್ ಗೋಸ್ವಾಮಿ-ದಾಸ್‍ಗುಪ್ತರ ನಡುವಿನ 500 ಪುಟಗಳ ವಾಟ್ಸಪ್ ಚ್ಯಾಟ್‍ಗಳು ಬಹಿರಂಗವಾಗಿದೆ.

ಇದರಲ್ಲಿ ಬಿಜೆಪಿ ಮತ್ತು ಪ್ರಧಾನಿಯೊಂದಿಗಿನ ಅರ್ನಾಬ್‍ರ ವೈಯಕ್ತಿಕ ಸಂಬಂಧವೂ ಬಹಿರಂಗವಾಗಿದ್ದು, ಚಾನೆಲ್ ರೇಟಿಂಗ್ ಹೆಚ್ಚಿಸಲು ಸಾಧ್ಯವಾಗಿದ್ದಕ್ಕೆ ಪ್ರಧಾನಿ ಕಚೇರಿಯ ಸಹಾಯಗಳನ್ನು ಒದಗಿಸುವುದಾಗಿ ದಾಸ್‍ಗುಪ್ತಾರಿಗೆ ಅರ್ನಾಬ್ ಹೇಳಿದ್ದು ಬಹಿರಂಗವಾಗಿದೆ. ಪ್ರಧಾನಿಯ ಮಾಧ್ಯಮ ಸಲಹೆಗಾರ ಸ್ಥಾನವನ್ನು ಕೊಡಿಸಲು ಪಾರ್ತೊದಾಸ್ ಗುಪ್ತ ಆಗ್ರಹಿಸಿದ್ದರು.