ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ನಿಧನ

0
521

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೆದುಳಿನ ರಕ್ತಸ್ರಾವದಿಂದ ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರು ಕೋಮಾ ಸ್ಥಿತಿಯಲ್ಲಿದ್ದರು. ಅವರ ಪುತ್ರ ಅರವಿಂದರ್ ಸಿಂಗ್ ಲೌಲಿ ಸಿಧು ಬೂಟಾ ಸಿಂಗ್‌ರವರ ನಿಧನದ ವಾರ್ತೆಯನ್ನು ಫೇಸ್‍ಬುಕ್ ಮೂಲಕ ತಿಳಿಸಿದ್ದಾರೆ.

1934 ಮಾರ್ಚ್ 21ಕ್ಕೆ ಜನಿಸಿದ್ದ ಬೂಟಾ ಸಿಂಗ್‍‌ರವರು 1960ರಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಅದುವರೆಗೆ ಅವರು ಅಕಾಲಿದಳದಲ್ಲಿದ್ದರು. 1962ರಲ್ಲಿ ಲೋಕಸಭೆಗೆ ಆಯ್ಕೆಯಾದರು. ರಾಜೀವ್ ಗಾಂಧಿ ಸಚಿವ ಸಂಪುಟ್ಟದಲ್ಲಿ ಗೃಹ ಇಲಾಖೆಯ ಸಚಿವರಾಗಿದ್ದರು. ಅಲ್ಲದೇ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1982ರಲ್ಲಿ ಗ್ಯಾನಿ ಜೈಲ್‍ಸಿಂಗ್ ಜೊತೆ ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಅಂತಿಮ ಪಟ್ಟಿಯಲ್ಲಿ ಬೂಟಾ ಸಿಂಗ್‍ರ ಹೆಸರಿತ್ತು. 1982ರ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿ ಅಧ್ಯಕ್ಷರಾಗಿದ್ದರು. ಬೂಟಾ ಸಿಂಗ್‍ರ ನಿಧನಕ್ಕೆ ಪ್ರಧಾನಿ ಮೋದಿ ಹಾಗೂ ಅನೇಕ ನಾಯಕರು ಸಂತಾಪ ಸೂಚಿಸಿದ್ದಾರೆ.