ಪ್ರತಿಭಟನಾ ನಿರತ ಯುಪಿ ರೈತನಿಂದ ಆತ್ಮಹತ್ಯೆ: ನನ್ನ ಸಾವಿಗೆ ಕೇಂದ್ರ ಸರಕಾರವೇ ಹೊಣೆ- ಆತ್ಮಹತ್ಯಾ ಪತ್ರ

0
718

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಪ್ರದೇಶದ 75 ವರ್ಷದ ರೈತರೊಬ್ಬರು ದಿಲ್ಲಿ-ಗಾಝಿಯಾಬಾದ್ ಗಡಿಯಲ್ಲಿ ರೈತರ ಹೋರಾಟದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಶ್ಮೀರ್ ಸಿಂಗ್ ಲಾದಿ ಆತ್ಮಹತ್ಯೆ ಮಾಡಿಕೊಂಡ ರೈತ. ಕೇಂದ್ರ ಸರಕಾರ ಚರ್ಚೆಗಳು ವಿಫಲಗೊಂಡಿರುವುದು ಅವರಲ್ಲಿ ತೀರಾ ನಿರಾಸೆ ತರಿಸಿತ್ತೆಂದು ವರದಿಗಳು ತಿಳಿಸಿವೆ.

ಶುಚಿತ್ವ ಕೋಣೆಯಲ್ಲಿ ಲಾದಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ತನ್ನ ಸಾವಿಗೆ ಕೇಂದ್ರ ಸರಕಾರ ಕಾರಣವೆಂದು ಅವರು ಪತ್ರ ಬರೆದಿಟ್ಟಿದ್ದಾರೆ. ಕಳೆದ ಕೆಲವು ದಿವಸಗಳಿಂದ ದಿಲ್ಲಿಯ ಕಠಿಣ ಚಳಿಯಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ಮಾತು ಕೇಳಲು ಕೇಂದ್ರ ಸರಕಾರ ತಯಾರಿಲ್ಲ. ನನ್ನ ಸಾವು ಇದಕ್ಕೊಂದು ಪರಿಹಾರವಾಗಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ಲಾದಿ ಚೀಟಿ ಬರೆದಿಟ್ಟಿದ್ದಾರೆ.

ಲಾದಿಯ ಜೊತೆ ಅವರ ಪುತ್ರ ಹಾಗೂ ಮೊಮ್ಮಗನೂ ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಲಾಸ್ಪುರದ ರೈತನಾಗಿದ್ದಾರೆ.