ಬಿಹಾರ ಜನತೆಗೆ ಉಚಿತ ಕೊರೋನ ವ್ಯಾಕ್ಸಿನ್; 19 ಲಕ್ಷ ಉದ್ಯೋಗ- ಇದು ಬಿಜೆಪಿ ಚುನಾವಣಾ ಪ್ರಣಾಳಿಕೆ

0
343

ಸನ್ಮಾರ್ಗ ವಾರ್ತೆ

ಪಾಟ್ನ,ಅ.22: ಬಿಹಾರ ವಿಧಾನಸಭೆಯ ಚುನಾವಣಾ ಪ್ರಣಾಳಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಕೊರೋನ ವ್ಯಾಕ್ಸಿನ್, ಐದು ವರ್ಷದಲ್ಲಿ 19 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುವುದೆಂದು ಭರವಸೆ ನೀಡಲಾಗಿದೆ. ಮೋದಿಯ ಆತ್ಮನಿರ್ಭರಕ್ಕೆ ಆದ್ಯತೆ ನೀಡಿ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಲಾಗಿದೆ. ಪ್ರಣಾಳಿಕೆಯ ಬಿಡುಗಡೆಯ ಸಮಯದಲ್ಲಿ ಹಿರಿಯ ನಾಯಕರಾದ ಭೂಪೇಂದ್ರ ಯಾದವ್, ನಿತ್ಯಾನಂದ ರಾಯ್, ಅಶ್ವಿನಿ ಚೌಬೆ, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

ಮೂರು ಲಕ್ಷ ಅಧ್ಯಾಪಕರಿಗೆ ನೇಮಕಾತಿ, ಗೋಧಿ, ಅಕ್ಕಿಯಲ್ಲದೆ ಇತರ ಧಾನ್ಯ ಬೆಳಗಳಿಗೂ ಬೆಂಬಲ ಬೆಲೆ ಘೋಷಿಸಲಾಗುವುದು. ಹಾಲುತ್ಪನ್ನದ ಯುನಿಟ್‍ಗಳ ನಿರ್ಮಾಣ ಮಾಡಲಾಗುವುದೆಂದು ಬಿಜೆಪಿ ಹೇಳಿದೆ.

ಭಾರತದಲ್ಲಿ ಕೊರೋನ ವ್ಯಾಕ್ಸಿನ್ ಪರೀಕ್ಷೆ ಅಂತಿಮ ಘಟ್ಟದಲ್ಲಿದೆ. ಭಾರೀ ಪ್ರಮಾಣದಲ್ಲಿ ಉತ್ಪಾದನೆ ತೊಡಗಿದರೆ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.