ಸನ್ಮಾರ್ಗ ವಾರ್ತೆ
ಚೆನ್ನೈ,ಸೆ. 7: ತಮಿಳ್ನಾಡಿನಲ್ಲಿ ಅಧ್ಯಾಪಕರಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ಶಿಕ್ಷಣ ಸಚಿವ ಕೆ.ಎ. ಶಂಗೊಟ್ಟಯ್ಯನ್ ತಿಳಿಸಿದರು. ರಾಜ್ಯದಲ್ಲಿ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳ ಅಧ್ಯಾಪಕರು ಈ ಕೊಡುಗೆಯನ್ನು ಪಡೆದುಕೊಳ್ಳಲಿದ್ದಾರೆ. ಎರಡೂವರೆ ಲಕ್ಷದಷ್ಟು ಅಧ್ಯಾಪಕರಿಗೆ ಲ್ಯಾಪ್‍ಟಾಪ್‍ಗಳನ್ನು ನೀಡಲಾಗುವುದು. ಈಗ ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮರಳಿದ ಬಳಿಕ ಲ್ಯಾಪ್‍ಟಾಪ್ ವಿತರಣೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಚಿವರು ತಿಳಿಸಿದರು.












