ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಘಟಕದ ನಿಯೋಗವು ಮಾಜಿ ಸಚಿವೆ ಶ್ರೀಮತಿ ಬಿ.ಟಿ. ಲಲಿತಾ ನಾಯಕ್ ಅವರನ್ನು ಭೇಟಿ ಮಾಡಿತು.
ನಿಯೋಗವು ಮಾಜಿ ಸಚಿವರ ಕುಶಲೋಪರಿ ವಿಚಾರಿಸಿದ ಬಳಿಕ ಸೀರತ್ ಕುರಿತ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿತು.
“ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್ (ಸ)” ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗುವ ಸೀರತ್ ಅಭಿಯಾನದ ಕುರಿತು ನಿಯೋಗವು ಪರಿಚಯಿಸಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಮಾತನಾಡಿ, “ಮಹಿಳೆಯರ ಹಕ್ಕು ಮತ್ತು ಅವರ ಏಳಿಗೆಗಾಗಿ ಪ್ರವಾದಿ ಮುಹಮ್ಮದ್ (ಸ) ಅವರು ಮಾಡಿರುವ ಕೆಲಸ ನಿಜಕ್ಕೂ ಐತಿಹಾಸಿಕವಾದುದು. ಅವರು ಮಹಿಳಾ ವಿಮೋಚಕರಾಗಿದ್ದರು. ಇದಕ್ಕಾಗಿ ನಾವು ಅವರಿಗೆ ಸದಾ ಚಿರಋಣಿಯಾಗಿರಬೇಕು” ಎಂದು ಹೇಳಿದರು. ಜೊತೆಗೆ ಅಭಿಯಾನದ ಯಶಸ್ಸಿಗೆ ಶುಭ ಹಾರೈಸಿದರು.
ಈ ನಿಯೋಗದಲ್ಲಿ ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮತ್ತು ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ಭಾಗವಹಿಸಿದ್ದರು.












