ಪುನಃ ಅಪಹರಣವಾದೀತೆಂಬ ಭೀತಿಯಲ್ಲಿದ್ದೇನೆ: ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ

0
49

ಸನ್ಮಾರ್ಗ ವಾರ್ತೆ

ಅಂಟಿಗುವಾ: ನಾನೀಗ ಅಂಟಿಗುವಾದಲ್ಲಿದ್ದೇನೆ. ಪುನಃ ಅಪಹರಣಕ್ಕೊಳಗಾಗುವ ಭೀತಿಯಲ್ಲಿದ್ದೇನೆ ಎಂದು ಪ್ರಮುಖ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹೇಳಿದರು. ಪಂಜಾಬ್ ನ್ಯಾಶನಲ್ ಬ್ಯಾಂಕಿನಿಂದ 13,500 ಕೋಟಿ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದು ಇದೇ ಕಾರಣದಿಂದ ಅವರು ಭಾರತದಿಂದ ಓಡಿ ಹೋಗಿದ್ದರು.

ತನ್ನ ಆರೋಗ್ಯ ಚೆನ್ನಾಗಿಲ್ಲ. ಭಾರತದಲ್ಲಿ ತನಗಾದ ಅನುಭವಗಳು ಹೆದರಿಕೆ ಹುಟ್ಟಿಸುವಂತಿದ್ದವು. ಕಳೆದ ವಾಸಸ್ಥಳದಲ್ಲಿ ಎದುರಿಸಬೇಕಾಗಿ ಬಂದ ಅನುಭವಗಳಿಂದ ಮಾನಸಿಕ ಸಂಘರ್ಷಕ್ಕೊಳಗಾಗಿದ್ದೇನೆ. ಅದನ್ನು ಕಡಿಮೆ ಮಾಡಲು ವೈದ್ಯರ ಸೂಚನೆಯನ್ನು ಪಾಲಿಸಬೇಕಾಗಿದ್ದು ಮನೆಬಿಟ್ಟು ಹೋಗಲು ಆಗುವುದಿಲ್ಲ ಎಂದು ಚೋಕ್ಸಿ ಹೇಳಿದರು.

ವಕೀಲರು ಈಗ ತನಗಾಗಿ ಅಂಟಿಗುವಾ ಮತ್ತು ಡೊಮೆನಿಕ್‍ನಲ್ಲಿ ಕೇಸು ವಾದಿಸುತ್ತಿದ್ದಾರೆ. ಅದರಲ್ಲಿ ಗೆಲ್ಲುವೆ ಎಂದು ಸಂದರ್ಶನದಲ್ಲಿ ಹೇಳಿದರು. ಕೊನೆಗೂ ಸತ್ಯವೇ ಗೆಲ್ಲುವುದೆಂಬ ನಂಬಿಕೆ ನನಗಿದೆ. ಕಾಮನ್‌ವೆಲ್ತ್ ದೇಶಗಳ ಕಾನೂನುಗಳಲ್ಲಿ ನಂಬಿಕೆ ಇದೆ. ಈ ವರ್ಷ ಮೇ 23ಕ್ಕೆ ಚೋಕ್ಸಿ ಅಂಟಿಗುವಾದಿಂದ ಕಾಣೆಯಾದರು. ಅನಧಿಕೃತವಾಗಿ ಡೊಮೆನಿಕ್‍ಗೆ ಬಂದುದಕ್ಕೆ ಡೊಮೆನಿಕ್‍ನಲ್ಲಿ ಬಂಧನಕ್ಕೊಳಪಡಿಸಿ ಕೇಸು ದಾಖಲಿಸಲಾಗಿತ್ತು. ನಂತರ ಆರೋಗ್ಯ ಕಾರಣಗಳಿಂದ ಡೊಮೆನಿಕ್ ಹೈಕೋರ್ಟು ಚೋಕ್ಸಿ ಯವರಿಗೆ ಜಾಮೀನು ನೀಡಿದೆ.