ಬುಡಿಬಾಬಾ ಕಬರಸ್ತಾನದಲ್ಲಿ ನೆರವೇರಿದ ಮೌಲಾನಾ ಸಿರಾಜುಲ್ ಹಸನ್ ಅಂತ್ಯಸಂಸ್ಕಾರ

0
737

ಸನ್ಮಾರ್ಗ ವಾರ್ತೆ

ರಾಯಚೂರು, ಏಪ್ರಿಲ್ 3- ಏಪ್ರಿಲ್ 2ರಂದು ನಿಧನರಾದ ಜಮಾಅತೆ ಇಸ್ಲಾಮಿ ಹಿಂದ್ ನ ಮಾಜಿ ರಾಷ್ಟ್ರಾಧ್ಯಕ್ಷ ಮೌಲಾನಾ ಸಿರಾಜುಲ್ ಹಸನ್ ಅವರ ಅಂತ್ಯಸಂಸ್ಕಾರ ಕ್ರಿಯೆಯು ಇಂದು (ಏಪ್ರಿಲ್ 3) ಇಲ್ಲಿನ ಬುಡಿಬಾಬಾ ಕಬರಸ್ತಾನದಲ್ಲಿ ನೆರವೇರಿತು.

ಅಪರಾಹ್ನ 2:30 ಕ್ಕೆ ಅವರ ಮನೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ಲಾ ಜಾವೇದ್ ಅವರ ನೇತೃತ್ವದಲ್ಲಿ ಸಾಮಾಜಿಕ ಅಂತರದೊಂದಿಗೆ ಜನಾಝ ನಮಾಜ್ ನೆರವೇರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ವಹೀದುದ್ದೀನ್ ಖಾನ್ ಅವರ ನೇತೃತ್ವದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕಬರಸ್ತಾನದಲ್ಲಿ ಜನಾಝ ನಮಾಜ್ ನೆರವೇರಿತು. ಈ ಸಂದರ್ಭದಲ್ಲಿ ಜಮಾಅತ್ ರಾಜ್ಯಾಧ್ಯಕ್ಷ ಡಾ/ ಬೆಳಗಾಮಿ ಮುಹಮ್ಮದ್ ಸಾದ್, ರಾಜ್ಯ ಕಾರ್ಯದರ್ಶಿ ಬಿಲಾಲ್ ಉಡುಪಿ, ಅಕ್ಬರಲಿ ಉಡುಪಿ, ಮಾಜಿ ರಾಜ್ಯಾಧ್ಯಕ್ಷ ಅತರುಲ್ಲಾ ಶರೀಫ್, ರಾಜ್ಯ ಸಲಹಾ ಸಮಿತಿ ಸದಸ್ಯ ಶಬ್ಬೀರ್ ಖಾನ್, ಎಸ್ ಐ ಓ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ/ ನಸೀಮ್ ಮುಂತಾದವರು ಉಪಸ್ಥಿತರಿದ್ದರು.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.