ಆಸ್ಟ್ರೇಲಿಯಾ: ಉದ್ಘಾಟಿಸಿದ ಕೆಲವೇ ಗಂಟೆಗಳಲ್ಲಿ ಗಾಂಧಿ ಪ್ರತಿಮೆಯ ಕೊರಳು ಕತ್ತರಿಸಿದ ದುಷ್ಕರ್ಮಿಗಳು: ಪ್ರಧಾನಿ ಮಾರಿಸನ್ ಖಂಡನೆ

0
597

ಸನ್ಮಾರ್ಗ ವಾರ್ತೆ

ಮೆಲ್ಬರ್ನ್: ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಕಿಡಿಗೇಡಿಗಳು ನಾಶಪಡಿಸಿದ್ದು ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ ಖಂಡಿಸಿದ್ದಾರೆ. ಭಾರತ ಸ್ವಾತಂತ್ರ್ಯದ 75 ವರ್ಷದ ಪ್ರಯುತ ಭಾರತ ಕಾನ್ಸುಲ್ ಜನರಲ್ ರಾಜ್ ಕುಮಾರ್ ಮತ್ತು ಇತರ ಆಸ್ಟ್ರೇಲಿಯದ ನಾಕರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮಾರಿಸನ್ ಶುಕ್ರವಾರ ರೊವಿಲ್ಲ ಎಂಬಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರಿನಲ್ಲಿ ಕಂಚಿನ ಪ್ರತಿಮೆ ಅನಾವರಣಗೊಳಿಸಿದ್ದರು. ಇದಾದ ಗಂಟೆಗಳ ಬಳಿಕ ನಾಶಪಡಿಸಲಾಗಿದೆ ಎಂದು ದ ಎಡ್ಜ್ ಪತ್ರಿಕೆ ವರದಿ ಮಾಡಿತ್ತು.

ಪ್ರಧಾನಿ ಕಟುಮಾತುಗಳಿಂದ ಇದನ್ನು ಖಂಡಿಸಿದ್ದು ಇದರಿಂದ ಭಾರತ- ಆಸ್ಟ್ರೇಲಿಯನ್ ಸಮಾಜ ನಿರಾಶಗೊಂಡಿವೆ ಎಂದು ಹೇಳಿ ವಿಷಾದ ಸೂಚಿಸಿದರು. ಜೊತೆಗೆ ದುಷ್ಕರ್ಮಿಗಳು ಹೀಗೆ ಮಾಡಿ ಪಾರಾಗಲಾರರು ಮತ್ತು ಇಂತಹ ಅಗೌರವ, ಅನಾದರ ಅಪಮಾನಕರ ಮತ್ತ ನಿರಾಶಜನಕವೆಂದು ಅವರು ಹೇಳಿದ್ದಾರೆ.

ದೇಶದ ಸಾಂಸ್ಕೃತಿಕ ಸ್ಮಾರಕಗಳ ವಿರುದ್ಧ ದಾಳಿ ಇದು. ಪ್ರತಿಮೆ ನಾಶಪಡಿಸಿದವರು ಭಾರತ ಮತ್ತು ಆಸ್ಟೇಲಿಯದ ಸಮಾಜದದೊಂದಿಗೆ ಅಗೌರವ ತೋರಿಸಿದರು. ಅವರು ಲಜ್ಜೆ ಪಡಬೇಕು ಎಂದರು. ಆಯುಧಗಳನ್ನು ಬಳಸಿ ಗಾಂಧಿ ಪ್ರತಿಮೆಯ ಕೊರಳು ಕತ್ತರಿಸಲಾಗಿದೆ. ಪ್ರತಿಮೆ ಅನಾವರಣಗೊಂಡು ಕೆಲವ ಗಂಟೆಗಳಲ್ಲಿ ಕೆಲವರು ಬಂದು ಕೃತವೆಸಗಿದರೆಂದು ಎಬಿಸಿ ನ್ಯೂಸ್ ವರದಿ ಮಾಡಿದೆ.