ಇಲ್ಲಿ ಕೊರೋನ ಲಸಿಕೆ ಪಡೆಯದವರಿಗೆ ಲಾಕ್‍ಡೌನ್!

0
604

ಸನ್ಮಾರ್ಗ ವಾರ್ತೆ

ಬರ್ಲಿನ್: ಪಶ್ಚಿಮ ಯುರೋಪಿನಲ್ಲಿ ಆಸ್ಟ್ರೀಯ ಅತ್ಯಂತ ಕಡಿಮೆ ವ್ಯಾಕ್ಸಿನೇಶನ್ ಆಗಿರುವ ದೇಶವಾಗಿದ್ದು ಇಲ್ಲಿನ ಜನಸಂಖ್ಯೆಯಲ್ಲಿ ಶೇ. 65ರಷ್ಟು ಮಂದಿ ಮಾತ್ರ ಸಂಪೂರ್ಣ ವ್ಯಾಕ್ಸಿನೇಶನ್‌ಗೆ ಒಳಗಾಗಿದ್ದಾರೆ.
ಇಲ್ಲಿ ರವಿವಾರ 11,552 ಹೊಸ ಕೊರೋನ ಪ್ರಕರಣಗಳು ವರದಿಯಾಗಿತ್ತು. ಆದುದರಿಂದ ವ್ಯಾಕ್ಸಿನೇಶನ್ ಪಡೆಯದ ಜನರಿಗೆ ಲಾಕ್‍ಡೌನ್ ನಿಯಂತ್ರಣ ಹೇರಲು ಸರಕಾರ ಮುಂದಾಗಿದೆ.

ಮನೆಯಿಂದ ಹೊರಬರುವ ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆಯೇ ಎಂದು ತಪಾಸಿಸಲು ಸರಕಾರ ಪೊಲೀಸರಿಗೆ ಸೂಚಿಸಿದೆ. ರವಿವಾರ ಮಧ್ಯರಾತ್ರೆಯಿಂದ ಲಾಕಡೌನ್ ಜಾರಿಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಪ್ಪತ್ತು ಲಕ್ಷ ಮಂದಿ ಆಸ್ಟ್ರೀಯಾದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇದೆ. ಯುರೋಪಿನಲ್ಲಿ ಕೊರೋನ ಹರಡುವಿಕೆ ಪುನಃ ಹೆಚ್ಚಳವಾದ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳದವರನ್ನು ನಿಯಂತ್ರಿಸಿಡುವುದಕ್ಕೆ ಆಸ್ಟ್ರೀಯ ಸರಕಾರ ಮುಂದಾಗಿದೆ. ಹನ್ನೆರಡು ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯದಿದ್ದರೆ, ಕೆಲಸ, ಅಗತ್ಯ ವಸ್ತುಗಳ ಖರೀದಿ, ವ್ಯಾಕ್ಸಿನೇಶನ್ ತೆಗೆದುಕೊಳ್ಳುವಿಕೆಯಂತಹ ಮುಂತಾದ ವಿಷಯಗಳಿಗೆ ಮಾತ್ರ ಹೊರಗೆ ಬರಲು ಅನುಮತಿ ನೀಡಲಾಗಿದೆ. ಆರಂಭದಲ್ಲಿ ಇಂತಹ ನಿಯಂತ್ರಣಗಳು ಹತ್ತು ದಿನಗಳವರೆಗೆ ಘೋಷಣೆಯಾಗಿದೆ.