ನಿರಂತರ ಪೆಟ್ರೋಲ್ ಬೆಲೆ ಏರಿಕೆ: ಬಜೆಟ್‍ನಲ್ಲಿ ಇಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡಿದ ಕೇರಳ

0
636
ತನ್ನ ಚೊಚ್ಚಲ ಬಜೆಟ್ ಮಂಡಿಸಿದ ಕೇರಳ ಹಣಕಾಸು ಸಚಿವ ಕೆ.ಎನ್.ಬಳಗೋಪಾಲ್

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ತೈಲ ದರ ಹೆಚ್ಚುತ್ತಿರುವ ಸಮಯದಲ್ಲಿಯೇ ಇಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಿ ಕೇರಳ ಸರಕಾರ ಬಜೆಟ್‍ನಲ್ಲಿ ಘೋಷಿಸಿದೆ. ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಾಲವನ್ನು ಇಂದು ಮಂಡಿಸಿದ ಬಜೆಟ್‍ನಲ್ಲಿ ಪ್ರತಿಪಾದಿಸಿದೆ. ದ್ವಿಚಕ್ರವನ್ನು ಬಳಸಿ ಬದುಕು ಕಟ್ಟಿಕೊಳ್ಳುವವರಿಗೆ ಇದು ತುಂಬ ಸಹಾಯಕವಾಗಲಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇರಳ ಹಣಕಾಸು ಸಚಿವ ಕೆ.ಎನ್.ಬಳಗೋಪಾಲ್ ಅವರು ತನ್ನ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ದ್ವಿಚಕ್ರ ವಾಹನ ಉಪಯೋಗಿಸಿ ವಿವಿಧ ರೀತಿಯಲ್ಲಿ ಜನಸಾಮಾನ್ಯರು ಉದ್ಯೋಗ ಮಾಡುತ್ತಾರೆ. ಮೀನು ಮಾರುವವರು. ಸಣ್ಣ ವ್ಯಾಪಾರ ಮಾಡುವವರು, ಹೋಮ್ ಡೆಲಿವರಿ ಯುವಕರು ಇಂಧನ ಬೆಲೆಯೇರಿಕೆಯಿಂದ ತತ್ತರಿಸಿದ್ದಾರೆ. ಜೊತೆಗೆ ಇದು ಪ್ರಕೃತಿ ಸೌಹಾರ್ದ ವಾಹನ ಕೂಡಾ ಆಗಿದೆ. ದ್ವಿಚಕ್ರ ವಾಹನ , ಇಲೆಕ್ಟ್ರಿಕ್ ಆಟೋ ರಿಕ್ಷಾ ಖರೀದಿಗೆ ಹಣಕಾಸು ಸಂಸ್ಥೆಗಳ ಜೊತೆಗೆ ಹೊಸ ಸಾಲ ರೀತಿಯನ್ನು ಸರಕಾರ ಚಾಲನೆಗೆ ತರಲಿದೆ.

2021-22 ಆರ್ಥಿಕ ವರ್ಷದಲ್ಲಿ 10,000 ದ್ವಿಚಕ್ರವಾಹನಗಳು ಮತ್ತು 5000 ಆಟೋ ರಿಕ್ಷಾಗಳ ಖರೀದಿಗೆ 200 ಕೋಟಿ ರೂಪಾಯಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು. ಬಡ್ಡಿಯ ಒಂದು ಭಾಗವನ್ನು ಸರಕಾರವು ವಹಿಸಿಕೊಳ್ಳುತ್ತದೆ. ಬಡ್ಡಿ ರಿಯಾಯಿತಿ ನೀಡಲಿಕ್ಕಾಗಿ ಹದಿನೈದು ಕೋಟಿ ರೂಪಾಯಿಯನ್ನು ಬಜೆಟ್ ಭಾಷಣದಲ್ಲಿ ಘೋಷಿಸಲಾಗಿದೆ. ಕೇರಳದಲ್ಲಿ ಪೆಟ್ರೋಲ್ ಲೀಟರ್‌ಗೆ 95ರೂಪಾಯಿ ದಾಟಿದೆ. ಡೀಸೆಲ್‍ಗೆ 90 ರೂಪಾಯಿ ಇದೆ.

ಪಿಣರಾಯಿ ವಿಜಯನ್ ಸರ್ಕಾರವು ರಾಜ್ಯದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು 20,000 ಕೋಟಿ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು 1000 ಕೋಟಿ ರೂ. ಗಳ ಬಜೆಟ್ ಘೋಷಣೆ ಮಾಡಿದೆ.