ಗಲಭೆಗೆ ಕರೆ ನೀಡಿದ ಕಪಿಲ್ ಮಿಶ್ರ ವಿರುದ್ಧ ಕ್ರಮ ಜರಗಿಸಬೇಕು- ಗೌತಂ ಗಂಭೀರ್

0
5270

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ; ಫೆ. 25: ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಬೀದಿಗಿಳಿಯಲು ಸಂಘಪರಿವಾರ ಕಾರ್ಯಕರ್ತರಿಗೆ ಕರೆ ನೀಡಿದ ಕಪಿಲ್ ಮಿಶ್ರ ವಿರುದ್ಧ ಕ್ರಮ ಜರಗಿಸಬೇಕು ಎಂದು ಬಿಜೆಪಿ ಸಂಸದ ಗೌತಂ ಗಂಭೀರ್ ಆಗ್ರಹಿಸಿದ್ದಾರೆ. ಕಪಿಲ್ ಮಿಶ್ರರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಕಪಿಲ್ ಮಿಶ್ರರ ವಿರುದ್ಧ ಕ್ರಮ ಜರಗಿಸಬೇಕೆಂದು ಅವರು ಹೇಳಿದರು.

ಪ್ರಚೋದಕ ಭಾಷಣ ಮಾಡಿದ್ದರೆ ಅದು ಕಪಿಲ್ ಮಿಶ್ರ ಆಗಲಿ, ಬೇರೆ ಯಾರೇ ಆಗಲಿ ಯಾವುದೇ ಪಾರ್ಟಿಯವನಾಗಿರಲಿ ಮುಖ ನೋಡದೆ ಕ್ರಮ ಜರಗಿಸಬೇಕೆಂದು ಗಂಭೀರ್ ಹೇಳಿದ್ದಾರೆ.