✍️ ಶಾಝಿಲ್ ಉಸ್ಮಾನ್
ಒಬ್ಬ ಆತ್ಮಹತ್ಯೆ ಮಾಡುವಾಗ ಏಳು ಮಂದಿ ಅದಕ್ಕೆ ಪ್ರಯತ್ನಿಸುತ್ತಾರೆ ಇದು ಇಸ್ರೇಲಿನ ಸೈನ್ಯದ ಸ್ಥಿತಿ.
ಇಸ್ರೇಲ್ ಸೈನಿಕರ ನಡುವೆ ಆತ್ಮಹತ್ಯೆ ಪ್ರಯತ್ನ ಮಹಾ ರೋಗದಂತೆ ವ್ಯಾಪಿಸಿದೆ ಎಂದು ವರದಿಯಾಗಿದೆ. ಒಂದು ಲೆಕ್ಕ ಪ್ರಕಾರ 2024 ಜನವರಿಯಿಂದ 2025 ಜುಲೈ ವರೆಗೆ 279 ಇಸ್ರೇಲ್ ಸೈನಿಕರು ಆತ್ಮಹತ್ಯೆಗೆ ಶ್ರಮಿಸಿದ್ದಾರೆ. ಇಸ್ರೇಲಿನ ಪಾರ್ಲಿಮೆಂಟಲ್ಲಿ ಮಂಡಿಸಲಾದ ಲೆಕ್ಕ ಇದು. ಇದು ಸೇವೆ ಸಲ್ಲಿಸುತ್ತಿರುವ ಸೈನಿಕರ ವಿಚಾರವಾಗಿದೆ. ಇಸ್ರೇಲ್ ಯುದ್ಧ ವಿರಾಮವನ್ನು ಉಲ್ಲಂಘಿಸಿ ಗಾಝದಲ್ಲಿ ಬಾಂಬಿಂಗ್ ಮಾಡುತ್ತಿರುವುದು ಒಂದು ಕಡೆ ಮುಂದುವರಿದಿದೆ. ಆದರೆ ಪಾರ್ಲಿಮೆಂಟ್ನ ಒತ್ತಾಯದಲ್ಲಿ ಈ ಕೆಲಸಕ್ಕೆ ಇಸ್ರೇಲಿನ ಸೈನ್ಯ ಮುಂದಾಗಬೇಕಾಗಿದೆ. ಇದು ಒಲ್ಲದಿರುವ ಕೆಲವರು ಆತ್ಮಹತ್ಯೆಯನ್ನೊ, ಆತ್ಮಹತ್ಯೆ ಪ್ರಯತ್ನವನ್ನೋ ಮಾಡುತ್ತಿದ್ದಾರೆ.
ಇನ್ನೊಂದು ವರದಿಯ ಪ್ರಕಾರ ಗಾಝದಲ್ಲಿ ಮಕ್ಕಳ ಸಹಿತ ಕೊಲ್ಲುವ ಭಯಾನಕ ಚಿತ್ರಗಳು ಇಸ್ರೇಲಿನ ಸೈನಿಕರಿಗೆ ಯುದ್ಧದ ನಡುವೆ ಸಾವು ಸಂಭವಿಸುತ್ತಿರುವುದು ಸೈನಿಕರಲ್ಲಿ ಮಾನಸಿಕ ವ್ಯಾಧಿ ಸೃಷ್ಟಿಸುತ್ತಿದೆ ಎಂದು ಇಸ್ರೇಲ್ ಮಾನಸಿಕ ಆರೋಗ್ಯ ಕೇಂದ್ರ ಬೊಟ್ಟು ಮಾಡುತ್ತಿದೆ. ಹದಾಶ್ ತಾಲ್ ಪಾರ್ಟಿಯ ಎಂಪಿ ಓಫಿರ್ ಕಾಸಿಫ್ ಮನವಿ ಮೇರೆಗೆ ಈ ಅಧ್ಯಯನವನ್ನು ಮಾನಸಿಕ ಆರೋಗ್ಯ ಕೇಂದ್ರ ತಯಾರಿಸಿದೆ.
ಸುಡಾನಿನಲ್ಲಿ 1500 ಸಾವಿರ ಮಂದಿಯ ಹತ್ಯೆ:
ಇದು ಇಸ್ರೇಲಿನದಕ್ಕಿಂತ ಏನೇನೂ ಕಡಿಮೆ ಇಲ್ಲದ ಕ್ರೌರ್ಯವಾಗಿದೆ. ಅಂದರೆ ಸುಡಾನಿನಲ್ಲೂ ನರಹಂತಕರು ಜನಸಾಮಾನ್ಯರ ಬೇಟೆಯಾಡುವುದು ನಡೆಯುತ್ತಿದೆ. ಸುಡಾನಿನ ಪ್ರಮುಖ ನಗರವಾದ ಅಲ್ಫಾಶರ್ ಅನ್ನು ವಶಪಡಿಸಿದ ಬೆನ್ನಿಗೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ನೋಡಿದ 1500 ಸಾಮಾನ್ಯ ಜನರನ್ನು ಬಂಡು ಕೋರ ಅರೆಸೇನೆ ಪಡೆಯಾಗಿರುವ ರಾಪಿಡ್ ಸಫೋರ್ಟ್ ಪೋರ್ಸ್ ಸಾಮೂಹಿಕವಾಗಿ ಹತ್ಯೆ ಮಾಡಿರುವುದು ವರದಿಯಾಗಿದೆ. ಸುಡಾನಿನ ಡಾಕ್ಟರ್ಸ್ ನೆಟ್ವರ್ಕ್ ಈ ವರದಿ ಮಾಡಿದೆ. ಆರ್ಎಸ್ಎಫ್ ಕೊಂದಿತು ಎಂದು ತಿಳಿಸಿದೆ.
ಸುಡಾನಿನಲ್ಲಿ ಎರಡೂವರೆ ವರ್ಷಗಳಿಂದ ಆಂತರಿಕ ಯುದ್ಧ ನಡೆಯುತ್ತಿದೆ. ಒಟ್ಟು 40 ಸಾವಿರ ಮಂದಿ ಕೊಲ್ಲಲ್ಪಟ್ಟಿದ್ದಾರೆ. ಹನ್ನೆರಡು ದಶಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂಬ ವಿಶ್ವಸಂಸ್ಥೆಯ ವರದಿ ಸರಿಯಾದರೆ ಇದು ಗಾಝದಲ್ಲಿ ಝಿಯೊನಿಸ್ಟರು ನಡೆಸಿದ ನರಹತ್ಯೆಗೆ ಏನೇನೂ ಕಡಿಮೆ ಇಲ್ಲದ ಕೃತ್ಯವಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಇವೆಲ್ಲ ನೋಡಿ ನಿಂತಿರುವುದು ಕೂಡ ಒಂದು ಪಾತಕವಾಗಿದೆ. ಮನುಷ್ಯರನ್ನು ಕೊಲ್ಲುವ ಈ ರಾಜಕೀಯ ಮೇಲುಗೈಯ ಪ್ರಯತ್ನಗಳು ಎಷ್ಟೊಂದ ಕೀಳ್ಮಟ್ಟದ್ದು.
ಆದರೆ ಊರು ಬಿಟ್ಟು ಬೇರೆ ಜಾಗಕ್ಕೆ ಹೋಗಲು ಬಯಸುವವರಿಗೆ ರಕ್ಷಣೆ ನೀಡಲು ಬದ್ಧರಿದ್ದೇವೆ ಎಂದು ಆರ್ಎಸ್ಎಫ್ ಘೋಷಿಸುತ್ತಿದೆ. ಅಂದರೆ ಹೊರಗೆ ತೋರ್ಪಡಿಸಲು ಸಂಭಾವಿತತೆಯ ವೇಷ ಇದು. ಆರ್ಎಸ್ಎಫ್ ನಾಯಕರನ್ನು ಯುದ್ಧ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಆದರೆ ಶಿಕ್ಷಿಸುವುದು ಯಾರು? ಅರ್ಎಸ್ಎಫ್ಗೆ ಅಮೆರಿಕನ್ ಆಡಳಿತದ ಬೆಂಬಲ ಇದೆ ಎಂಬ ವರದಿಗಳೂ ಇತ್ತು. ನಿಮಗೆ ತಿಳಿದಿರಲಿ. ಸುಡಾನಿನಲ್ಲಿ ಅಲ್ಲಿನ ಸೇನೆಯ ವಿರುದ್ಧ ಅರೆ ಸೈನಿಕ ಪಡೆ 2023ರಲ್ಲಿ ಶುರುಮಾಡಿದ ಗೃಹ ಯುದ್ಧದ ಪರಿಣಾಮಗಳು ಇವೆಲ್ಲ.
ನಿರಂಕುಶಾಧಿಪತಿ ಹಸೀನಾರಿಗೆ ಊರಿಗೆ ಹೋಗಬೇಕಾಗಿದೆ:
ಪದಚ್ಯುತ ಬಾಂಗ್ಲಾದೇಶದ ಪ್ರಧಾನಿ ಹಸೀನಾ ವಾಜೆದ್ ಅವರು ದಿಲ್ಲಿಯಲ್ಲಿ ತನ್ನ ಬದುಕು ಸ್ವತಂತ್ರ ರೀತಿಯಲ್ಲಿ ಮುಂದುವರಿಯುತ್ತಿದೆ, ಆದರೆ ಊರಿಗೆ ಹೋಗಬೇಕು ಎಂದು ಹೇಳುತ್ತಿದ್ದಾರೆ. ಇದೊಂದು ತೋರ್ಪಡಿಕೆ, ಪ್ರಾಮಾಣಿಕ ಮಾತಲ್ಲ ಎಂದು ಹೇಳಬಹುದಾದಂತಹ ವಾತಾವರಣವೇ ಇಂದು ಬಾಂಗ್ಲಾದಲ್ಲಿರುವುದು. ಹಸೀನಾ ತನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದ. ಚುನಾವಣಾ ರಾಜಕೀಯವನ್ನೇ ಪಲ್ಟಿ ಹೊಡೆಯಿಸಿ ಪ್ರತಿಪಕ್ಷ ಜಮಾಅತ್ ನಾಯಕರನ್ನು ಪಾಕಿಸ್ತಾನ ಪರರೆಂದು ಬಿಂಬಿಸಿ ಟ್ರಿಬ್ಯೂನಲ್ ಮೂಲಕ ವಿಚಾರಣೆಯ ನಾಟಕ ನಡೆಸಿ ಮರಣದಂಡನೆಗೆ ದೂಡಿ ಹಾಕಿದ ಪಾತಕಿಯಾಗಿದ್ದಾರೆ. ಹೀಗೆಂದು ಅಲ್ಲಿನ ಜನರು ನಿರ್ಧರಿಸಿದ್ದರಿಂದಲೇ ಅವರು ರಾತ್ರೋರಾತ್ರಿ ತಪ್ಪಿಸಿಕೊಂಡು ಹೆಲಿಕಾಪ್ಟರ್ ಹತ್ತಿ ಭಾರತಕ್ಕೆ ಬಂದಿದ್ದು. ತಾವು ಇತರರಿಗೆ ಎಸಗಿದ ಪರಿಸ್ಥಿತಿಯೇ ತಮ್ಮನ್ನೂ ಕಾಡುತ್ತದೆ ಎಂಬುದಕ್ಕೆ ಹಸೀನಾರ ಇಂದಿನ ಸ್ಥಿತಿ ಒಂದು ಉದಾಹರಣೆೆಯಾಗಿದೆ.
ಹೌದು, ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಅವರನ್ನು ಸ್ವೀಕರಿಸುವ ಪರಿಸ್ಥಿತಿ ಇಲ್ಲ. ಅವರ ಮೇಲೆ ಹೊರಿಸಲಾದ ಆರೋಪಗಳಿಗೆ ವಿಚಾರಣೆ ಎದುರಿಸಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಅವಾಮೀ ಲೀಗ್ ಪಾರ್ಟಿಗೆ ನಿಷೇಧ ಇದೆ. ಹಸೀನಾ ಹೇಳುತ್ತಿರುವುದು ಮುಂದಿನ ಚುನಾವಣೆಯಲ್ಲಿ ಇದನ್ನು ಪ್ರತಿಭಟಿಸಿ ಕಾರ್ಯಕರ್ತರು ಚುನಾವಣೆಯಿಂದ ದೂರ ನಿಲ್ಲಲಿದ್ದಾರೆ ಎಂದು. ಅವಾಮಿ ಲೀಗ್ ಅಧಿಕಾರ ಪಡೆಯುವ ಸಾಧ್ಯತೆ ಬಹುತೇಕ ಶಾಶ್ವತವಾಗಿ ಮುಚ್ಚಿದ ಸ್ಥಿತಿ ಇದೆ. ಹೀಗೆ ಇರುವಾಗ ಹಸೀನಾ ದಿಲ್ಲಿ ಬಿಟ್ಟು ಇನ್ನೆಲ್ಲಿಯೂ ಕದಲುವ ಪರಿಸ್ಥಿತಿಯೂ ಇಲ್ಲ. ಹಸೀನಾರನ್ನು ಪದಚ್ಯುತಗೊಳಿಸಿದ್ದು ವಿದ್ಯಾರ್ಥಿ ಪ್ರತಿಭಟನೆಯಾಗಿದೆ. ಈಗ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ.
ಇತ್ತೀಚೆಗೆ ಪಾಕಿಸ್ತಾನದ ಜನರಲ್ರಿಗೆ ನಮ್ಮ ದೇಶದ ಈಶಾನ್ಯ ನಾಡುಗಳನ್ನು ಪ್ರಧಾನಿ ಯೂನುಸ್ರು ಸೇರಿಸಿ ಭೂಪಟ ಕೊಟ್ಟಿದ್ದರು. ಇವೆಲ್ಲ ಹಸೀನಾರಿಗೆ ಮತ್ತು ಅವರ ರಾಜಕೀಯಕ್ಕೆ ಸಹಕಾರಿಯಾಗಿಲ್ಲ. ದಿಲ್ಲಿಯು ಬಾಂಗ್ಲಾದ ಈ ಹೊಸ ಬೆಳವಣಿಗಗಳನ್ನು ಗಮನಿಸುತ್ತಿದೆ. ಅಮೆರಿಕದ ನಿಗಾದಲ್ಲಿ ಬಾಂಗ್ಲಾದೇಶದಲ್ಲಿ ಬದಲಾವಣೆ ಆಗಿದೆ ಅಂದರೆ ಪಾಕಿಸ್ತಾನಕ್ಕೆ ಪೂರಕವಾಗುವ ನಾಯಕರನ್ನು ಅಲ್ಲಿ ಅಧಿಕಾರದಲ್ಲಿ ಕುಳ್ಳಿರಿಸಲಾಗಿದೆ ಎಂಬ ವಾದಕ್ಕೆ ಈಗ ಅರ್ಥ ಹುಟ್ಟಿಕೊಳ್ಳುತ್ತಿದೆ.
ಬಾಂಗ್ಲಾದೇಶದ ಯೂನುಸ್ ಸರಕಾರ ಅವಾಮಿ ಲೀಗ್ನ ಯುದ್ಧ ಅಪರಾಧವನ್ನು ಬೆಟ್ಟು ಮಾಡಿ ಅದಕ್ಕೆ ನಿಷೇಧವನ್ನೂ ಹೇರಿತು. ಇನ್ನೊಂದು ಕಡೆ ಹಸೀನಾರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸಬೇಕೆಂದು ಮೋದಿ ಸರಕಾರವನ್ನು ಅವರ ಸರಕಾರ ಒತ್ತಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಸೀನಾ ತನ್ನ ಬೆಂಬಲಿಗರನ್ನು ಸಮಾಧಾನ ಪಡಿಸುವ ಸಲುವಾಗಿ ನನಗೆ ಊರಿಗೆ ಹೋಗಬೇಕಾಗಿದೆ ಎಂದು ಮಾತ್ರ ಹೇಳಲು ಸಾಧ್ಯ. ಯಾಕೆಂದರೆ ಬದಲಾದ ಪರಿಸ್ಥಿತಿಯಲ್ಲಿ ಟ್ರಿಬ್ಯೂನಲ್ ಅವರ ವಿರುದ್ಧ ಇರುವ ಘನ ಅಪರಾಧ ಆರೋಪಕ್ಕೆ ಮರಣ ದಂಡನೆಯನ್ನೇ
ವಿಧಿಸಬಹುದು ಎಂದು ಅಂತಾರಾಷ್ಟ್ರೀಯವಾಗಿ ಚರ್ಚೆಯಾಗುತ್ತಿದೆ.
ವಿಷಯಕ್ಕೆ ಬರೋಣ:
2024ರಲ್ಲಿ ಇಸ್ರೇಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣದಲ್ಲಿ ಶೇ. 78ರಷ್ಟ ಸೈನಿಕರೇ ಇದ್ದಾರೆ. ಅದಕ್ಕಿಂತ ಪೂರ್ವ ವರ್ಷಗಳಿಗೆ ಹೋಲಿಸಿದರೆ ಇದು ದೊಡ್ಡ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಗಾಝ ವಂಶಹತ್ಯೆ ಶುರು ಆಗುವುದಕ್ಕಿಂತ ಮುಂಚೆ ಅಂದರೆ 2023 ಅಕ್ಟೋಬರ್ನಲ್ಲಿ ಇಸ್ರೇಲಿನ ಆತ್ಮಹತ್ಯೆಯ ಪ್ರಮಾಣ ಶೇ. 17ರಷ್ಟಿತ್ತು. 2017ರಿಂದ 2025 ಜುಲೈ ವರೆಗೆ ಒಟ್ಟು 124 ಸೈನಿಕರು ಆತ್ಮಹತ್ಯೆ ಮಾಡಿದ್ದಾರೆ.
ಇವರಲ್ಲಿ ಶೇ. 68 ಮಂದಿ ಕಡ್ಡಾಯ ಸೈನಿಕ ಸೇವೆಗೆ ದೂಡಿ ಹಾಕಲ್ಪಟ್ಟವರು ಮತ್ತು ಶೇ. 21 ಆಕ್ಟಿವ್ ರಿಸರ್ವ್ ಸರ್ವಿಸಿನಲ್ಲಿರುವವರು ಮತ್ತು ಶೇ. 11ರಷ್ಟು ಪೂರ್ಣಾವಧಿ ಸೈನಿಕರು ಆಗಿದ್ದಾರೆ. ಶೇ. 17ರಷ್ಟು ಆತ್ಮಹತ್ಯೆ ಮಾಡಿ ಕೊಂಡ ಸೈನಿಕರು ಅದಕ್ಕಿಂತ ಮೊದಲು ಒಂದೊ ಎರಡೋ ತಿಂಗಳಲ್ಲಿ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿದ್ದಾರೆ. ಮನುಷ್ಯನನ್ನು ಕೊಲ್ಲುವ ಮನುಷ್ಯ ವೇಷದಲ್ಲಿರುವ ರಾಕ್ಷಸೀಯತೆ ಹೀಗೂ ತದ್ವಿರುದ್ಧ ಪರಿಣಾಮಕ್ಕೆ ದೂಡಬಹುದು.












