ಸನ್ಮಾರ್ಗ ವಾರ್ತೆ
ಬಂಗಾರದ ಬೆಲೆ ಗಗನಕ್ಕೇರಿದೆ. ಈಗ ಒಂದು ಗ್ರಾಂಗೆ 11,360 ರೂಪಾಯಿ ಆಗಿದ್ದು ಒಂದು ಪವನ್ ಗೆ 90880 ರೂಪಾಯಿಯಾಗಿ ಏರಿಕೆ ಕಂಡಿದೆ. ಶೀಘ್ರದಲ್ಲಿ ಪವನ್ಗೆ ಒಂದು ಲಕ್ಷವನ್ನು ದಾಟುವ ಸಾಧ್ಯತೆ ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ 5,640 ರೂಪಾಯಿ ಹೆಚ್ಚಳವಾಗಿರುವುದು ಈ ಬಗ್ಗೆ ಸೂಚನೆಯನ್ನು ನೀಡುತ್ತಿದೆ.
ಸೆಪ್ಟಂಬರ್ 28ರಂದು ಗ್ರಾಮ್ಗೆ 10,585 ರೂಪಾಯಿ ಇತ್ತು. ಈಗ 11360 ರೂಪಾಯಿಯಾಗಿ ಏರಿಕೆಯಾಗಿದೆ. ಇದರ ಮಧ್ಯೆ ಕೆಲವು ದಿನಗಳ ಕಾಲ ಬಂಗಾರದ ಬೆಲೆಯಲ್ಲಿ ಅಲ್ಪಸ್ವಲ್ಪ ಏರಿಕೆಯಾಗಿತ್ತು. ಆದರೆ ಇದೀಗ ಮತ್ತೆ ದಾಖಲೆಯ ಮಟ್ಟಕ್ಕೆ ಬೆಲೆ ಏರಿಕೆಯಾಗುತ್ತಿದೆ.
18 ಕ್ಯಾರೆಟ್ ಬಂಗಾರಕ್ಕೆ ಗ್ರಾಮ್ಗೆ 9345 ರೂಪಾಯಿಯಾಗಿದೆ. 14 ಕ್ಯಾರೆಟ್ ಬಂಗಾರಕ್ಕೆ ಗ್ರಾಮ್ಗೆ ರೂ. 7775 ಯಾಗಿ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರಕ್ಕೆ ಬೆಲೆ ಏರಿಕೆಯಾಗಿರುವುದೇ ಭಾರತದಲ್ಲೂ ಬಂಗಾರ ತುಟ್ಟಿಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಬಂಗಾರದ ಮೇಲೆ ಹೆಚ್ಚಿನ ಜನರು ಹೂಡಿಕೆ ಮಾಡುತ್ತಿರುವುದರಿಂದ ಬಂಗಾರ ತುಟ್ಟಿಯಾಗುತ್ತಿದೆ ಎಂದು ವರದಿಯಾಗಿದೆ.












