ಕುಸಿಯುತ್ತಿರುವ ಚಿನ್ನದ ಬೆಲೆ: ಗ್ರಾಹಕರಲ್ಲಿ ಸಂತಸ…!

0
526

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ಹಲವಾರು ತಿಂಗಳಿನಿಂದ ದಿನನಿತ್ಯ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಲ್ಲಿ 1900 ರೂ.ಯಷ್ಟು ಕುಸಿದಿದ್ದು, ಚಿನ್ನ ಖರೀದಿಸುವ ಗ್ರಾಹಕರ ಮುಖದಲ್ಲಿ ಸಂತಸ ತಂದಿದೆ.

ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಶುಕ್ರವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ (22 ಕ್ಯಾರಟ್‌) ಬೆಲೆ 4,561 ರೂಪಾಯಿ ನಿಗದಿಯಾಗಿದೆ. ನವೆಂಬರ್‌ ತಿಂಗಳಾರಂಭದಲ್ಲಿ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದ ಚಿನ್ನದ ಬೆಲೆಯು ಇತ್ತೀಚೆಗೆ ಸಾಲು ಸಾಲು ಹಬ್ಬದ ಸಮಯದಲ್ಲಿ ಏರಿಕೆ ಕಂಡಿತ್ತು. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಬಂಗಾರದ ಬೆಲೆ 650 ರೂ. ಕಡಿಮೆಯಾಗಿದೆ.

10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆಯಲ್ಲಿ ಕಳೆದ ಎರಡು ದಿನಗಳಿಂದ ಏರಿಕೆ ಕಂಡಿತ್ತು, ಶುಕ್ರವಾರ 24 ಕ್ಯಾರಟ್‌ 10 ಗ್ರಾಂ ಅಪರಂಜಿ ಚಿನ್ನದ ದರ ಅಲ್ಪ ಇಳಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ 49,700 ರೂಪಾಯಿ ನಿಗದಿಯಾಗಿದೆ. ಮಂಗಳೂರಿನಲ್ಲಿ ₹45,610 (22 ಕ್ಯಾರಟ್‌) ₹49,770, (24 ಕ್ಯಾರಟ್‌)ಗೆ ಬೆಲೆ ನಿಗದಿಯಾಗಿದೆ.

ಬೆಳ್ಳಿ ಬೆಲೆಯಲ್ಲಿಯೂ ಕೂಡಾ ಕಳೆದ ಕೆಲ ದಿನಗಳಿಂದ ಇಳಿಕೆ ಕಂಡುಬಂದಿದ್ದು, ಬರೋಬ್ಬರಿ 2500 ರೂ ಇಳಿದಿದೆ.