ಮಲಬಾರ್ ಎಕ್ಸ್ ಪ್ರೆಸ್, ಮಂಗಳೂರು ಸೂಪರ್ ಫಾಸ್ಟ್ ನಲ್ಲಿ ಭಾರೀ ಚಿನ್ನ ಕಳ್ಳತನ

0
943

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ, ಫೆ. 8: ಚೆನ್ನೈ- ಮಂಗಳೂರು ಸೂಪರ್ ಫಾಸ್ಟ್, ಮಲಬಾರ್ ಎಕ್ಸ್ ಪ್ರೆಸ್‍ನಲ್ಲಿ ಭಾರೀ ಚಿನ್ನದರೋರಡೆ ನಡೆದಿದೆ. ಚೆನ್ನೈ- ಮಂಗಳೂರು ಸೂಪರ್ ಫಾಸ್ಟ್ ರೈಲಿನಿಂದ ಚೆನ್ನೈಯ ನಿವಾಸಿಯೊಬ್ಬರ ಹದಿನೈದು ಲಕ್ಷ ಬೆಲೆಬಾಳುವ ಚಿನ್ನ ಕಳೆದು ಹೋಗಿದೆ.

ತಿರುವನಂತಪುರಂ-ಮಂಗಳೂರು ಮಲಬಾರ್ ಎಕ್ಸ್ ಪ್ರೆಸ್ ನಿಂದ ಹದಿನೈದು ಪವನ್ ಚಿನ್ನ ದೋಚಲಾಗಿದೆ. ಮಲಬಾರ್ ಎಕ್ಸ್ ಪ್ರೆಸ್‍ನಿಂದ ಕಾಂಞಂಗಾಡ್ ನಿವಾಸಿಯ ಚಿನ್ನ ಕದಿಯಲಾಗಿದೆ. ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ನಿಂದ ತಿರೂರ್ ಕಡೆಯಲ್ಲಿ ಮಲಬಾರ್ ಎಕ್ಸ್ ಪರೆಸ್‍ನಿಂದ ವಡಗರ-ಮಾಹಿ ಪರಿಸರದಲ್ಲಿ ಕಳ್ಳತನ ನಡೆದಿದೆ ಎಂದು ಸಂದೇಹಿಸಲಾಗಿದೆ. ಒಂದೇ ಕಡೆಗೆ ಹೊರಟು ಹೋಗುವ ಎರಡು ರೈಲುಗಳಲ್ಲಿ ಕಳ್ಳತನವನ್ನು ಒಂದೇ ತಂಡ ಮಾಡಿದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಚೆನ್ನೈಯ ಪನ್ನಿಮಾರನ್ ಎಸಿ ಕಂಪಾರ್ಟ್‍ಮೆಂಟಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಚಿನ್ನವನ್ನು ಕದಿಯಲಾಗಿದೆ. ಈತ ಕೋಝಿಕ್ಕೋಡಿಗೆ ಬಂದು ರೈಲ್ವೆ ಪೊಲೀಸರಲ್ಲಿ ದೂರು ಕೊಟ್ಟಿದ್ದಾರೆ. ಮಲಬಾರ್ ಎಕ್ಸ್ ಪ್ರೆಸ್‍ನಲ್ಲಿ ದೋಚಲಾದ ಪಯ್ಯನ್ನೂರಿನ ನಿವಾಸಿ ರೈಲಿನಲ್ಲಿಯೇ ಇದ್ದು ಇವರಿಂದ ಪೊಲೀಸರು ವಿವರವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.