ಸ್ಪಷ್ಟ ತೀರ್ಮಾನವಿಲ್ಲದೆ ಮುಗಿದ ರೈತರೊಂದಿಗಿನ‌‌ ಸಭೆ: ಡಿ.3ಕ್ಕೆ ಮತ್ತೆ ಮಾತುಕತೆ

0
551

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶಾದ್ಯಂತ ಚರ್ಚೆಯಲ್ಲಿರುವ ರೈತರ ಹೋರಾಟವು ಮತ್ತೆ ಮುಂದುವರಿದಿದ್ದು, ಕೇಂದ್ರದ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಇಂದು ದೆಹಲಿಯಲ್ಲಿ ನಡೆದ ಸಭೆಯು ಯಾವುದೇ ಸ್ಪಷ್ಟವಾದ ತೀರ್ಮಾನಗಳಿಲ್ಲದೇ ಕೊನೆಗೊಂಡಿದೆ.

ಕೇಂದ್ರ ಸರ್ಕಾರ ಮುಂದಿಟ್ಟ ತಜ್ಞರ ಸಲಹಾ ಸಮಿತಿ ರಚನೆ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನೇರವಾಗಿ ರೈತರೊಂದಿಗೆ ಮಾತ್ರ ಮಾತುಕತೆ ನಡೆಸುವಂತೆ ಆಗ್ರಹಿಸಿವೆ.

ಈ ಹಿನ್ನೆಲೆಯಲ್ಲಿ ಇಂದಿನ(ಡಿ.01-ಮಂಗಳವಾರ) ಯಾವುದೇ ತಾರ್ಕಿಕ ತೀರ್ಮಾನಗಳಿಲ್ಲದೇ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಡಿ.3(ಗುರುವಾರ) ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಲು ಎರಡೂ ಬಣಗಳು ಒಪ್ಪಿಕೊಂಡಿದ್ದಾರೆ.‌ ಈ‌‌ ಮಧ್ಯೆ ತಮ್ಮ ಪ್ರತಿಭಟನೆಯನ್ನು ರೈತರು ಮುಂದುವರಿಸಿದ್ದಾರೆ.