ಉಮ್ರಾ ಮಾಡಬಯಸುತ್ತೀರಾ? ಹಾಗಿದ್ದರೆ ಈ ನಿಯಮದ ಬಗ್ಗೆ ಗೊತ್ತಿರಲಿ

0
595

ಸನ್ಮಾರ್ಗ ವಾರ್ತೆ

ಉಮ್ರ ವೀಸಾಗಳಿಗೆ ಸೌದಿ ಅರೇಬಿಯಾ ಕಠಿಣ ನಿಯಮವನ್ನು ಹೇರಿದೆ. ಉಮ್ರಾ ವೀಸಾದಲ್ಲಿ ಆಗಮಿಸುವವರು ಎಲ್ಲಿ ವಾಸಿಸುತ್ತೀರಿ ಅನ್ನುವುದನ್ನು ತಿಳಿಸುವುದು ಕಡ್ಡಾಯವಾಗಿದೆ. ಹೋಟೆಲ್ ಅಪಾರ್ಟ್ಮೆಂಟ್ ಮುಂತಾದ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ದಾಖಲೆಗಳನ್ನು ಉಮ್ರಾ ಸರ್ವಿಸ್ ಕಂಪೆನಿಗಳು ವಿಸಾದ ಜೊತೆಗೆ ಹಾಜರುಪಡಿಸಬೇಕಾಗಿದೆ. ಸಚಿವಾಲಯದ ನುಸುಕ್ ಮಸಾರ್ ಎಂಬ ಡಿಜಿಟಲ್ ಫ್ಲಾಟ್ ಫಾರ್ಮನಲ್ಲಿ ಒಪ್ಪಂದದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂದು ಉಮ್ರಾ ಕಂಪೆನಿಗಳಿಗೆ ಸಚಿವಾಲಯ ಸೂಚನೆ ನೀಡಿದೆ.

ಸೌದಿ ಟೂರಿಸಂ ಸಚಿವಾಲಯದ ಲೈಸೆನ್ಸ್ ಅನ್ನು ಹೊಂದಿರುವ ವಾಸ ಕೇಂದ್ರಗಳಲ್ಲಿ ಯಾತ್ರಿಕರಿಗೆ ವಾಸ ಸೌಲಭ್ಯವನ್ನು ಏರ್ಪಡಿಸಬೇಕು. ಉಮ್ರ ಯಾತ್ರಿಕರಿಗೆ ನೀಡುವ ಸೇವೆಗಳ ಗುಣಮಟ್ಟವನ್ನು ಸ್ಪಷ್ಟಪಡಿಸುವುದಕ್ಕೆ ಮತ್ತು ಇನ್ನಿತರ ಸೇವಾ ಕಾರ್ಯಗಳನ್ನು ಉನ್ನತಗೊಳಿಸುವ ಉದ್ದೇಶದಿಂದ ಈ ನಿಯಮವನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಟೂರಿಸಂ ಸಚಿವಾಲಯದ ಲೈಸೆನ್ಸ್ ಅನ್ನು ಹೊಂದಿರುವ ವಾಸಕೇಂದ್ರಗಳ ಲ್ಲಿ ವಾಸಿಸುವುದಾದರೆ ಮಾತ್ರ ಉಮ್ರವಿಸಾವನ್ನು ನೀಡಲಾಗುವುದು. ಹೊಸ ಉಮ್ರಾ ವಿಸಾವನ್ನು ಜೂನ್ 11ರಂದು ನೀಡಲು ಪ್ರಾರಂಭಿಸಲಾಗಿರುವುದು ಇಲ್ಲಿ ಗಮನಾರ್ಹ.