ಗುಜರಾತ್ ಕೋಮು ಗಲಭೆ: 10 ಪ್ರಕರಣಗಳಲ್ಲಿ ವಿಚಾರಣೆ ಕೊನೆಗೊಳಿಸಿದ ಸುಪ್ರೀಂ ಕೋರ್ಟ್

0
123

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತಿನ 2002ರ ಜನಾಂಗೀಯ ಹತ್ಯೆಯಲ್ಲಿ ನಿಖರ ತನಿಖೆಗೆ ಆಗ್ರಹಿಸಿ ಮಾನವ ಹಕ್ಕು ಆಯೋಗ ಸಲ್ಲಿಸಿದ ಅರ್ಜಿ ಪ್ರಕರಣ ಸಹಿತ ಹತ್ತು ಪ್ರಕರಣಗಳಲ್ಲಿ ವಿಚಾರಣಾ ಪ್ರಕ್ರಿಯೆಯನ್ನೇ ಸುಪ್ರೀಂ ಕೋರ್ಟು ನಿಲ್ಲಿಸಿದೆ. ನರೇಂದ್ರ ಮೋದಿ ಸಹಿತ ಗುಜರಾತ್ ಸರಕಾರದ ಉನ್ನತರನ್ನು ಆರೋಪ ಮುಕ್ತಗೊಳಿಸಿದ ತೀರ್ಪು ಹೊರಡಿಸಿದ ಬೆನ್ನಿಗೆ ಮುಂದಕ್ಕೆ ಯಾವ ತನಿಖೆಗೂ ಆಸ್ಪದ ಇಲ್ಲದಂತೆ ಚೀಫ್ ಜಸ್ಟಿಸ್ ನೇತೃತ್ವದ ಪೀಠ ತುರ್ತು ಕ್ರಮ ಕೈಗೊಂಡಿದೆ.

ಚೀಫ್ ಜಸ್ಟಿಸ್ ಯು.ಯು ಲಲಿತ್ ಅಧಿಕಾರಕ್ಕೆ ಬಂದ ಎರಡನೇ ದಿನದಲ್ಲಿ ಅವರ ಅಧ್ಯಕ್ಷತೆಯ ಮೂವರು ಸದಸ್ಯರ ಪೀಠ ಗುಜರಾತ್ ಜನಾಂಗೀಯ ಹತ್ಯೆಯಲ್ಲಿ ಇನ್ನು ತನಿಖೆ ಇರಲ್ಲ ಎಂದು ಹೇಳಿದೆ. 2002ರ ಜನಾಂಗೀಯ ಹತ್ಯೆ ಬೆನ್ನಿಗೆ ಸಲ್ಲಿಸಿದ ಎರಡು ದಶಗಳಿಂದ ವಿಚಾರಣೆಗೆ ಎತ್ತಿಕೊಳ್ಳದ ಆವಶ್ಯಕತೆಯನ್ನು ಕೋರ್ಟು ತಿರಸ್ಕರಿಸಿದೆ. ಹೆಚ್ಚು ಟೀಕೆಗೊಳಗಾಗಿದ್ದ ಎಸ್‍ಐಟಿ ತನಿಖೆ ಗುಜರಾತ್ ಜನಾಂಗೀಯ ಹತ್ಯೆ ಪ್ರಕರಣಗಳಲ್ಲಿ ಸಾಕು ಎಂದು ಜಸ್ಟಿಸ್ ರವೀಂದ್ರ ಭಟ್ಟ, ಜೆಬಿ ಪರದಿವಾಲ ಮತ್ತು ಜಸ್ಟಿಸ್ ಯುಯು ಲಲಿತ್‍ರನ್ನೊಳಗೊಂಡ ಪೀಠ ತೀರ್ಪು ನೀಡಿತು.

ತನಿಖೆಯಲ್ಲಿ ನಡೆದ ಅಪರಾಧ ಯುಕ್ತ ಲೋಪಗಳನ್ನು ಬೆಟ್ಟು ಮಾಡಿ ರಾಷ್ಟ್ರೀಯ ಮಾನವಹಕ್ಕು ಆಯೋಗ ಮರು ವಿಚಾರಣೆ ಆಗ್ರಹಿಸಿ ಅರ್ಜಿ ಸಲ್ಲಿಸಿತ್ತು. ಇದನ್ನು ಕೂಡ ಕೋರ್ಟು ತಳ್ಳಿಹಾಕಿದೆ. ಮೋದಿ ಸಹಿತ ಇರುವವರ ಜನಾಂಗೀಯ ಹತ್ಯೆಯಲ್ಲಿನ ಪಾತ್ರಗಳನ್ನು ಹೊರತರಬೇಕೆಂದು ಆಗ್ರಹಿಸಿ ಗುಜರಾತ್ ವಂಶೀಯ ಹತ್ಯಾ ಬಲಿಪಶುಗಳಿಗಾಗಿ ಟೀಸ್ಟಾ ಸೆಟಲ್ವಾಡ್, ಪೀಸ್(ಸಿಜೆಪಿ)ಸಲ್ಲಿಸಿದ ಅರ್ಜಿಯನ್ನು ಚೀಫ್ ಜಸ್ಟಿಸ್ ಪೀಠ ಕೊನೆಗೊಳಿಸಿದೆ. ಅಂದಿನ ಗುಜರಾತ್ ಪೊಲೀಸರ ತನಿಖೆಯನ್ನು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಟೀಸ್ಟಾ ಸೆಟಲ್ವಾಡ್ ಅರ್ಜಿ ಸಲ್ಲಿಸಿದ್ದರು.

ವಿಶೇಷ ತನಿಖಾ ತಂಡಕ್ಕಾಗಿ ಹಾಜರಾದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಗುಜರಾತ್ ವಂಶ ಹತ್ಯೆಯಲ್ಲಿ ತಾವು ತನಿಖೆ ಮಾಡಿದ ಒಂಬತ್ತು ಪ್ರಕರಣದಲ್ಲಿ ನರೋಡ ಪಾಟ್ಯ ಸಾಮೂಹಿಕ ಹತ್ಯೆಯನ್ನು ಹೊರತು ಪಡಿಸಿ ಎಲ್ಲ ಪ್ರಕರಣಗಳ ತನಿಖೆ ಪೂರ್ಣಗೊಂಡಿದೆ ಎಂದು ಕೋರ್ಟಿಗೆ ಮನವರಿಕೆ ಮಾಡಿ ಕೊಟ್ಟರು.

ಇತರ ಕೇಸುಗಳ ವಿಚಾರಣೆ ಪೂರ್ಣಗೊಂಡಿದೆ ಅಪೀಲುಗಳನ್ನು ಹೈಕೋರ್ಟಿಗೋ ಸುಪ್ರೀಂಕೋರ್ಟಿಗೋ ತಲುಪಿಸಲಾಗಿದೆ ಎಂದು ರೋಹಟಗಿ ವಾದಿಸಿದರು. ಇದನ್ನು ಕೋರ್ಟು ಅಂಗೀಕರಿಸಿ ಈ ಎಲ್ಲ ಅರ್ಜಿಗಳನ್ನು ಅಸಿಂಧು ಎಂದು ತೀರ್ಪು ವಿಧಿಸಿತು. ಈ ಅರ್ಜಿಗಳು ಸುಪ್ರೀಂಕೋರ್ಟಿನಲ್ಲಿ ಇದ್ದು ಇನ್ನು ಯಾವ ಪ್ರಯೋಜನ ಇಲ್ಲವೆಂದು ಕೇಸ್ ಫೈಲು ಕೊನೆಗೊಳಿಸುವುದಾಗಿ ನ್ಯಾಯಾಲಯ ಹೇಳಿತು.