ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ನೆಹರೂ ಕುಟುಂಬ ಸ್ಪರ್ಧಿಸುವುದಿಲ್ಲ!

0
218

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನೆಹರೂ ಕುಟುಂಬ ಸ್ಪರ್ಧಿಸುವುದಿಲ್ಲ. ಅಧಿಕೃತ ಪಕ್ಷ ಮತ್ತು ಸುಧಾರಣಾ ವಾದಿಗಳಾದ ಜಿ23ಗಳ ನಡುವೆ ಸ್ಪರ್ಧೆ ನಡೆಯುವ  ಸಾಧ್ಯತೆಗಳಿವೆ. ನೆಹರೂ ಕುಟುಂಬ ಮುಂದಿಟ್ಟ ಮೊದಲ ಹೆಸರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್. ಅಲ್ಲದಿದ್ದರೆ, ಶಶಿ ತರೂರ್, ಮನೀಷ್ ತಿವಾರಿಯವರನ್ನು ಅಭ್ಯರ್ಥಿಯನ್ನಾಗಿಸಲು ಜಿ23 ಯತ್ನಿಸುತ್ತಿದೆ.

ರಾಹುಲ್ ಗಾಂಧಿ ಪುನಃ ಅಧ್ಯಕ್ಷರಾಗುವ ಸಾಧ್ಯತೆ ಹೊಸ ಪರಿಸ್ಥಿತಿಯಲ್ಲಿಯೂ ಮಂಕಾಗಿಲ್ಲ.  ನೆಹರೂ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲವೆಂದಾದರೆ ಫಲಿತಾಂಶ ಭಿನ್ನವಾಗಲಿದೆ . 2000ದಲ್ಲಿ ನಡೆದ ಚುನಾವಣೆಗಿಂತಲೂ ಈ ಬಾರಿ ಫಲಿತಾಂಶ ಭಿನ್ನವಾಗಲಿದೆ ಎಂದು ಊಹಿಸಲಾಗಿದೆ.  ಕಳೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿಗೆ 7,542 ಮತ ಜಿತಿನ್ ಪ್ರಸಾದ್‍ರಿಗೆ 94 ಮತಗಳು ಲಭಿಸಿದ್ದವು.

ರಾಹುಲ್ ವಿದೇಶದಿಂದ ಬಂದ ಮೇಲೆ ಅವರ ಮೇಲೆ ಒತ್ತಡ ಹಾಕಲು ಗೆಹ್ಲೋಟ್ ಸಹಿತ ಉನ್ನತ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ. ಅದು ಆಗದಿದ್ದರೆ ಮಾತ್ರ ಚುನಾವಣೆ ಸಾಧ್ಯತೆ ಇದೆ. ರಾಹುಲ್ ಅಧ್ಯಕ್ಷರಾಗಲು ಸಿದ್ಧರಾದರೆ ಸ್ಪರ್ಧೆ ಇರುವುದಿಲ್ಲ. ಇದಕ್ಕೆ ಗೆಹ್ಲೋಟ್ ಮುಂತಾದವರು ಯತ್ನಿಸುತ್ತಿದ್ದಾರೆ. ನೆಹರೂ ಕುಟುಂಬದಿಂದ ಒಬ್ಬರು ಅಧ್ಯಕ್ಷರಾಗುವುದನ್ನು ಸುಧಾರಣಾವಾದಿಗಳೂ ವಿರೋಧಿಸಿಲ್ಲ.

ನೆಹರೂ ಕುಟುಂಬ ಅಧ್ಯಕ್ಷರಾಗಲು ಹಿಂದೆ ಸರಿದರೆ ಬಿರುಸಿನ ಪೈಪೋಟಿ ಖಚಿತವಾಗಿದೆ. ಇಂತಹ ಸಂದರ್ಭದಲ್ಲಿ ಗೆಹ್ಲೋಟ್ ವಿರುದ್ಧ ಬಲಶಾಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸುಧಾರಣಾವಾದಿಗಳು ನಿರ್ಧರಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಮತ್ತು ನ್ಯಾಯಪೂರ್ಣ ಸ್ಪರ್ಧೆ ನಡೆಯಲಿದೆ ಎಂಬ ಅಭಿಪ್ರಾಯವನ್ನು ಬಹಿರಂಗವಾಗಿ ಶಶಿ ತರೂರು ಹೇಳಿದ್ದಾರೆ. ಅವರ ಕಣ್ಣು ಕೂಡ ಅಧ್ಯಕ್ಷ ಸ್ಥಾನದ ಮೇಲಿದೆ ಎನ್ನಲಾಗುತ್ತಿದೆ.

ಸ್ಪರ್ಧೆಗಿಳಿಯುವ ವಿಷಯ ಸುಧಾರಣಾವಾದಿಗಳ ಮೂಲಕ ರವಿವಾರದ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತವಾಗಿತ್ತು. ಅಂತಿಮ ಪಟ್ಟಿಯ ಕುರಿತು ಆನಂದ ಶರ್ಮ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಅಮೂಲಾಗ್ರ ಬದಲಾವಣೆ ಬಯಸಿದವರು ಚುನಾವಣೆಯ ವೇಳೆ ಅಭ್ಯರ್ಥಿಯನ್ನು ನಿಲ್ಲಿಸದಿದ್ದರೆ ಅವರು ಪ್ರಶ್ನಾರ್ಹರಾಗುತ್ತಾರೆ. ಯಾರೂ ಬೇಕಾದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದೆಂದು ಎಐಸಿಸಿ ನಾಯಕತ್ವ ಹೇಳಿದೆ.