ಸನ್ಮಾರ್ಗ ವಾರ್ತೆ
ದೋಹ,ಆ. 17: ಕೊಲ್ಲಿ ದೇಶಗಳಲ್ಲಿ ಅತಿ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿರುವುದರಲ್ಲಿ ಕತರ್ ಮೊದಲ ಸ್ಥಾನದಲ್ಲಿದೆ. 2019ರಲ್ಲಿ ಶಕ್ತಿಶಾಲಿ ಆರ್ಥಿಕ ಸಾಧನೆಗೆ ಕತಾರ್ ಭಾಜನವಾಯಿತು ಎಂದು ಸೆಂಟ್ರಲ್ ಬ್ಯಾಂಕ್ ಕ್ಯೂಸಿಬಿ ತಿಳಿಸಿದೆ. ಜಾಗತಿಕ ತೈಲ ಬೆಲೆಯ ಹೆಚ್ಚಳ, ರಫ್ತಿನಲ್ಲಿ ಮುನ್ನಡೆ, ಆರ್ಥಿಕ ಸಮತೋಲನದಲ್ಲಿ ಪ್ರಗತಿ ಇವು 2019ರ ಮೈಕ್ರೊ ಇಕಾನಮಿಕ್ ಸ್ಟೇಬ್ಲಿಟಿಯನ್ನು ತಂದು ಕೊಡುವಲ್ಲಿ ಮುಖ್ಯ ಪಾತ್ರ ವಹಿಸಿತು ಎಂದು ಕತರ್ ಸೆಂಟ್ರಲ್ ಬ್ಯಾಂಕ್ ಹೇಳಿತು.
ಬ್ಯಾಂಕಿನ 2018ರ ವಾರ್ಷಿಕ ವರದಿಯಲ್ಲಿ ವಿವರಗಳನ್ನು ಅದು ನೀಡಿದ್ದು, ಕಳೆದ ವರ್ಷ ಕತರ್ ಆರ್ಥಿಕ ವ್ಯವಸ್ಥೆ ಭದ್ರವಾಗಿತ್ತು ಎಂದಿದೆ. ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ದರ 14 ಆಗಿತ್ತು. 2022ರಲ್ಲಿ ಇಲ್ಲಿ ಪಿಫಾ ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಅಗತ್ಯವಿರುವ ಯೋಜನೆಗಳೆಲ್ಲವೂ ಅಂತಿಮ ಹಂತದಲ್ಲಿವೆ. ಆರ್ಥಿಕ ವೈವಿಧ್ಯೀಕರಿಣ ಕತರ್ನ ಯೋಜನೆಯನ್ನು ಯಶಸ್ವಿಗೊಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕತರ್ ಸೆಂಟ್ರಲ್ ಬ್ಯಾಂಕ್ ವರದಿಯ ಪ್ರಕಾರ ಚಿಲ್ಲರೆ, ಸಗಟು ವ್ಯಾಪಾರ ಕ್ಷೇತ್ರದ ಹಣಕಾಸು ವ್ಯವಸ್ಥೆಯಲ್ಲಿ ಪ್ರಗತಿ ದಾಖಲಾಗಿದೆ. ಕತರ್ ಸ್ಟಾಕ್ ಎಕ್ಸ್ಚೇಂಜ್ ಪ್ರದರ್ಶನವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












