ಮಲೇಶ್ಯದಲ್ಲಿ ಝಾಕಿರ್ ನಾಯಕ್ ವಿಚಾರಣೆ

0
641

ಸನ್ಮಾರ್ಗ ವಾರ್ತೆ

ಕುಅಲಾಲಂಪುರ,ಆ.17: ಮಲೇಶ್ಯದಲ್ಲಿ ಕಾಯಂ ವಾಸವಿರುವ ಪ್ರಮುಖ ಇಸ್ಲಾಮಿಕ್ ಬೋಧಕ ಡಾ. ಝಕೀರ್ ನಾಯ್ಕ್‍ರನ್ನು ಮಲೇಶ್ಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ. ಮಲೇಶ್ಯದ ಪರಂಪರಾಗತ ಅಲ್ಪಸಂಖ್ಯಾತ ವಿಭಾಗವನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪದಲ್ಲಿ ಅವರ ವಿಚಾರಣೆ ನಡೆಯಲಿದೆ. ಮಲೇಶ್ಯದ ಅಧ್ಯಕ್ಷ ಮುಹಾತೀರ ಮುಹಮ್ಮದ್‍ರನ್ನು ಉದ್ಧರಿಸಿ ಅಲ್‍ ಜಝೀರ ವರದಿಮಾಡಿದೆ. ಅವರಿಂದ ಮಲೇಶ್ಯದಿಂದ ಹೊರಹಾಕಬೇಕೆಂದು ಸಚಿವ ಸಂಪುಟ ಮತ್ತು ದೇಶದಲ್ಲಿ ಬಲವಾದ ವಾದ ಪ್ರತಿವಾದಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಮಲೇಶ್ಯದಲ್ಲಿ ಚೀನ ಮತ್ತು ಭಾರತದ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ.

ಢಾಕ ಸ್ಫೋಟ ಪ್ರಕರಣದ ಆರೋಪಿಗಳ ಹೇಳಿಕೆಯ ನಂತರ ನಾಯ್ಕ್‌ರ ವಿರುದ್ಧ ಭಾರತದ ಭಯೋತ್ಪಾದನಾ ವಿರೋಧಿ ಏಜೆನ್ಸಿ ಕೇಸು ದಾಖಲಿಸಿಕೊಂಡಿತ್ತು. ಭಯೋತ್ಪಾದನೆಗೆ ನಾಯ್ಕ್‌ರ ಭಾಷಣ ಕಾರಣವೆಂದು ಸ್ಪೋಟ ಪ್ರಕರಣದ ಆರೋಪಿಗಳು ಹೇಳಿದ್ದರು. ನಂತರ ಭಾರತದಿಂದ ಹೊರ ನಡೆದ ನಾಯ್ಕ್ ವಿರುದ್ಧ ಕಪ್ಪು ಹಣ ವ್ಯವಹಾರ ಸಹಿತ ಹಲವಾರು ಪ್ರಕರಣಗಳನ್ನು ಭಾರತದಲ್ಲಿ ದಾಖಲಿಸಲಾಗಿತ್ತು. 2016ರಲ್ಲಿ ಝಾಕಿರ್ ನಾಯ್ಕ್ ಭಾರತವನ್ನು ತೊರೆದಿದ್ದರು. ಮಲೇಶ್ಯ ಝಾಕಿರ್ ನಾಯ್ಕ್‌ರವರಿಗೆ ಕಾಯಂ ಪೌರತ್ವ ನೀಡಿತ್ತು.