ಸನ್ಮಾರ್ಗ ವಾರ್ತೆ
ಟೆಲ್ ಅವೀವ್: ಹಮಾಸ್ ಮತ್ತೆ ಗಾಜಾವನ್ನು ಆಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದು, ಗಾಜಾಕ್ಕೆ ಭೇಟಿ ನೀಡಿದ ನಂತರ ಅವರು ಈ ನಿಲುವು ಪ್ರಕಟಿಸಿದರು.
ಕದನ ವಿರಾಮದ ಪ್ರಸ್ತಾಪಗಳನ್ನು ಪುನಃ ತಿರಸ್ಕರಿಸಿದ ನೆತನ್ಯಾಹು, ಇಸ್ರೇಲ್ ಒತ್ತೆಯಾಳುಗಳನ್ನು ಹಿಂದಿರುಗಿಸಲು ಸಹಾಯ ಮಾಡುವವರಿಗೆ ಹೆಚ್ಚಿನ ಬಹುಮಾನಗಳನ್ನು ನೀಡುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ, ಒತ್ತೆಯಾಳುಗಳನ್ನು ಹಿಂದಿರುಗಿಸುವವರಿಗೆ $5 ಮಿಲಿಯನ್ ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.
ನೆತನ್ಯಾಹು ಅವರ ಭೇಟಿಯ ವೇಳೆ, ಇಸ್ರೇಲ್ ರಕ್ಷಣಾ ಪಡೆಗಳು ಗಾಝಾದಲ್ಲಿ ಪ್ರಮುಖ ಯಶಸ್ಸು ಸಾಧಿಸುತ್ತಿದ್ದು, ಹಮಾಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ನಿರ್ಧಾರಕ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದು , ಒತ್ತೆಯಾಳುಗಳನ್ನು ಪತ್ತೆಹಚ್ಚಿ ವಾಪಸ್ ಕರೆತರುವ ಕಾರ್ಯ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಇಸ್ರೇಲ್ ತನ್ನ ಆಕ್ರಮಣವನ್ನು ಉತ್ತರ ಗಾಜಾದಲ್ಲಿ ತೀವ್ರಗೊಳಿಸಿರುವ ಸಮಯದಲ್ಲಿ ಈ ಭೇಟಿ ನಡೆದಿದ್ದು, ಜಬಾಲಿಯಾದಲ್ಲಿ ಅಲ್-ಬಲಾದ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಸತ್ತವರ ಸಂಖ್ಯೆ 12 ಕ್ಕೆ ಏರಿದೆ.












