ಹೈಲ್ಯಾಂಡ್ ಇಸ್ಲಾಮಿಕ್ ಫಾರಂ‌ನಿಂದ 20ನೇ ಮನೆ ಹಸ್ತಾಂತರ

0
692

ಸನ್ಮಾರ್ಗ ವಾರ್ತೆ

ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫಾರಂನ(ಎಚ್.ಐ.ಎಫ್) ‘ಪ್ರಾಜೆಕ್ಟ್ ಆಶಿಯಾನ’ದ ವತಿಯಿಂದ ವರ್ಷಕ್ಕೆ 10 ಮನೆ ನಿರ್ಮಿಸಿ ಕೊಡುವ ಯೋಜನೆಯಡಿಯಲ್ಲಿ ನೆಲ್ಯಾಡಿಯ ಸಮೀಪದ ಆರ್ಲಾ ಎಂಬಲ್ಲಿ ಸುಸಜ್ಜಿತ 20ನೇ ಮನೆಯನ್ನು ಪತಿಯ ಆಶ್ರಯ ವಂಚಿತ 2 ಮಕ್ಕಳು ತಾಯಿ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿರುವ ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮನ್ಸಿದುಲ್ ಏಹ್ವಾನ್ ಖತೀಬ್ ಮೌಲಾನಾ ಅಲ್ತಾಫ್ ಹುಸೈನ್ ಭಾಗವಹಿಸಿದರು. ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಶರೀಫ್ ದಾರಿಮಿ, ಮಂಗಳೂರಿನ ಉದ್ಯಮಿ ಆಕ್ಯುರೇಟ್ ಸಂಸ್ಥೆಯ ನಿರ್ದೇಶಕರಾದ ಖಾಲಿದ್ ರವರು ಮನೆಯ ಕೀಲಿಕೈಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಎಚ್.ಐ.ಎಫ್ ಅಧ್ಯಕ್ಷಾದ ಸಾಜಿದ್ ಎ.ಕೆ ಸಂಘಟನೆಯ ‘ಪ್ರಾಜೆಕ್ಟ್ ಆಶಿಯಾನ’ದ ಕುರಿತು ವಿವರಿಸಿದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಿಜ್ವಾನ್ ಪಾಂಡೇಶ್ವರ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು. ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ನಾಜಿಮ್ ಎ.ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.