ಸನ್ಮಾರ್ಗ ವಾರ್ತೆ
ಪ್ಯಾರಿಸ್,ಅ.21: ಮಹಿಳೆಯೊಬ್ಬರನ್ನು ಹಿಜಾಬ್ ತೆಗೆಯಲು ಬಲವಂತ ಪಡಿಸಿದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ. ಪಾರ್ಸ್ ಟುಡೆ ಡಾಟ್ ಕಾಮ್ ಪ್ರಕಾರ, ಹಿಜಾಬ್ ತೆಗೆಯಲು ನಿರಾಕರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಘಟನೆ ಪ್ಯಾರಿಸ್ನ ಉತ್ತರದ ಸೇಂಟ್ ಡೆನಿಸ್ನಲ್ಲಿ ಅಕ್ಟೋಬರ್ ಹದಿನೆಂಟರಂದು ನಡೆಯಿತು.
ಮಹಿಳೆ ಹಿಜಾಬ್ ಧರಿಸಿ ವಾಹನ ಚಲಾಯಿಸುತ್ತಿದ್ದರು. ಅವರನ್ನು ತಡೆದ ಪೊಲೀಸರು ಹಿಜಾಬ್ ತೆಗೆಯುವಂತೆ ಬಲವಂತಪಡಿಸಿದ್ದಾರೆ. ಇದಕ್ಕೆ ಸಮ್ಮತಿಸದಿದ್ದಾಗ ಮಹಿಳೆಯನ್ನು ಪೊಲೀಸರು ಬಂಧಿಸಿದರು. ಮಹಿಳೆಯ ಬಂಧನದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಕೋಲಾಹಲ ಸೃಷ್ಟಿಸಿತು ಎಂದು ಸ್ಪೂಟನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪೊಲೀಸರು ಮೊದಲು ಮಹಿಳೆಗೆ ತನ್ನ ಹಿಜಾಬ್ ತೆಗೆಯಲು ಹೇಳಿದರು. ಮಹಿಳೆ ಅದಕ್ಕೆ ಸಮ್ಮತಿಸಲಿಲ್ಲ. ನಂತರ ಮಹಿಳೆಯನ್ನು ಪೊಲೀಸರು ಬಂಧಿಸಿದರು. ಘಟನೆಯ ವಿರುದ್ಧ ಜನರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದ ಪೊಲೀಸರು, “ಮಹಿಳೆಯಿ ಪೊಲೀಸರನ್ನು ಅಪಮಾನಿಸಿದ್ದರಿಂದ ಬಂಧಿಸಲಾಯಿತು” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬಿಎಫ್ಎಂ ಟಿವಿಯ ವರದಿಯ ಪ್ರಕಾರ ಈ ಘಟನೆ ಅಕ್ಟೋಬರ್ 18ಕ್ಕೆ ನಡೆದಿದೆ. ಮಹಿಳೆಯನ್ನು ಪ್ಯಾರಿಸ್ನ ಉತ್ತರದ ಒಬರ್ ವಿಲರ್ಸ್ ನಗರದಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಂಧಿಸಿಡಲಾಗಿತ್ತು ಎಂದು ವರದಿ ತಿಳಿಸಿದೆ.
Last week, far-right politicians in France stormed out of a local assembly to protest the presence of a woman wearing a head scarf. The acrimonious debate that followed is only the latest over the hijab in France. https://t.co/aWgHr7uwhX
— New York Times World (@nytimesworld) October 19, 2019
This isn't secularism, it's discrimination. https://t.co/fyxClMDacc
— Alheli Picazo (@a_picazo) October 19, 2019












