ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ.19: ಹಿಮಾಚಲ ಪ್ರದೇಶದಲ್ಲಿ ಕೊರೊನಾದಿಂದ ಗುಣಮುಖನಾಗಿದ್ದ ವ್ಯಕ್ತಿಯಲ್ಲಿ ಪುನಃ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಕೊರೊನಾ ಪೀಡಿತರ ಈಗ ಸಂಖ್ಯೆ 23ಕ್ಕೇರಿಕೆಯಾಗಿದೆ. ಇಲ್ಲಿ ಒಟ್ಟು 40 ಮಂದಿಗೆ ಈವರೆಗೆ ಕೊರೊನಾ ದೃಢಪಟ್ಟಿದೆ. ಇವರಲ್ಲಿ ಹದಿನೇಳು ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಇವರಲ್ಲಿ ಉನ ಜಿಲ್ಲೆಯ ರೋಗ ಮುಕ್ತನಾದ ವ್ಯಕ್ತಿಯಲ್ಲಿ ಪುನಃ ವೈರಸ್ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈತನಲ್ಲಿ ಪುನಃ ರೋಗ ಹೇಗೆ ಕಾಣಿಸಿಕೊಂಡಿತು ಎಂದು ಗೊತ್ತಾಗಿಲ್ಲ. ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಇವರಲ್ಲಿ 14 ಮಂದಿ ಕೊರೊನಾ ರೋಗ ಮುಕ್ತರಾಗಿದ್ದಾರೆ. ಇಬ್ಬರು ಚಿಕಿತ್ಸೆಯಲ್ಲಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












