ಹಿಮಾಚಲ ಪ್ರದೇಶ: ಕುಲುವಿನಲ್ಲಿ ಭೂಕುಸಿತದಿಂದ ಹಲವು ಮನೆಗಳು ನಾಶ ; ಬೆಚ್ಚಿಬೀಳುವ ದೃಶ್ಯಗಳು ವೈರಲ್

0
165

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 24: ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದ ಭೂಕುಸಿತದಿಂದ ಹಲವು ಮನೆಗಳು ಕುಸಿದು ಹೋಗಿವೆ. ಹಲವು ಮಂದಿ ಮಣ್ಣಿನಡಿಗೆ ಸಿಲುಕಿರುವ ಬಗ್ಗೆ ಶಂಕಿಸಲಾಗಿದೆ. ಮನೆ ಕುಸಿಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.

ಮಣ್ಣಿನಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಷ್ಟ್ರೀಯ ಮತ್ತು ರಾಜ್ಯಗಳ ದುರಂತ ನಿವಾರಣ ಸೇನೆಯನ್ನು ನಿಯೋಜಿಸಲಾಗಿದ್ದು ಹಿಮಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿವಸಗಳಲ್ಲಿ ಭಾರೀ ಮಳೆ ಆಗಬಹುದು ಎಂದು ಹವಮಾನ ಇಲಾಖೆ ಹೇಳಿದೆ.

ಕುಲುವಿನ ಅನ್ನಿಯಲ್ಲಿ ಮನೆ ಕುಸಿಯುತ್ತಿರುವ ದೃಶ್ಯಗಳು ಹೊರಬಂದಿದ್ದು, ಅಪಾಯ ಮುನ್ಸೂಚನೆಯಿಂದ ಜನರನ್ನು ಸ್ಥಳಾಂತರಿಸಿರುವುದರಿಂದ ದೊಡ್ಡ ದುರಂತದಿಂದ ಪಾರಾಗುವಂತಾಯಿತು ಎಂದು ಹಿಮಾಚಲ ಪ್ರದೇಶ ಅಧ್ಯಕ್ಷ ಸುಕ್‍ವಿಂದರ್ ಸಿಂಗ್ ಸುಕ್ಕು ಹೇಳಿದರು.

ಹಿಮಾಚಲ ಪ್ರದೇಶದ ವಿವಿಧ ಕಡೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಕುಲು ಮನಾಲಿಯ ಹೈವೆಯಲಿ ಭಾರಿ ಮಳೆಯಿಂದ ಹಲವು ವಾಹನಗಳು ಕೆಟ್ಟು ಹೋಗಿವೆ. ಕುಲು ಮತ್ತು ಮಾಂಡಿಯನ್ನು ಸಂಧಿಸುವ ರಸ್ತೆ ಕುಸಿಯಿತು. ಈ ದಾರಿಯಲ್ಲಿ ಯಾವ ವಾಹನವೂ ಹೊಗದಂತೆ ನಿಷೇಧಿಸಲಾಗಿದೆ.