ಗ್ರಾಮದ ಮುಸ್ಲಿಮ್ ಕುಟುಂಬಗಳಿಗೆ ಈದ್ ಕಿಟ್ ನೀಡಿದ ಹಿಂದೂ ಬಾಂಧವರು- ಸೌಹಾರ್ದತೆ, ಸಹೋದರತ್ವದ ಹೃದಯಸ್ಪರ್ಶಿ ಕಥೆ

0
1775

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.25: ಒಂದೆಡೆ ಭಾರತದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷಾಪರಾಧಗಳು ಕೊರೋನಾ ವೈರಸ್ ಲಾಕ್‌ಡೌನ್‌ನಲ್ಲಿ ಹೆಚ್ಚಾಗಿದ್ದರೆ ಮತ್ತೊಂದೆಡೆ ಸೌಹಾರ್ದತೆ ಮತ್ತು ಸಹೋದರತ್ವದ ಹೃದಯಸ್ಪರ್ಶಿ ಕಥೆಗಳಿವೆ. ಅಂತಹ ಒಂದು ಕಥೆ ಮಹಾರಾಷ್ಟ್ರದ ಲಾತೂರ್ ಪ್ರದೇಶದಿಂದ ಹೊರಹೊಮ್ಮಿತು, ಅಲ್ಲಿ ಹಿಂದೂ ಪುರುಷರ ಗುಂಪು ಮುಸ್ಲಿಂ ವಿಧವೆಯರು ಮತ್ತು ಕುಟುಂಬಗಳಿಗೆ ಈದ್ ಕಿಟ್ ವಿತರಿಸಿದರು.

ಅವರು ತಮ್ಮೂರಿನ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯಗಳನ್ನು ಕೋರಲು ಒಂದು ಮಾರ್ಗೋಪಾಯ ಕಂಡುಕೊಂಡಿರುವುದಾಗಿ ಸಾರುವ ಒಂದು ಟ್ವೀಟ್ ಇದೀಗ ವೈರಲ್ ಆಗಿದೆ.

ಮಸೂರ್ ದಾಲ್, ವಾಶಿಂಗ್ ಪೌಡರ್, ಡ್ರೈ ಫ್ರೂಟ್ಸ್, ಸೇವಿಗೆ ಮತ್ತು ಸೂಜಿಗಳ ಪ್ಯಾಕೆಟ್‌‌ಗಳನ್ನು ಕಿಟ್‌ ಒಳಗೊಂಡಿದೆ.

ಮುಸ್ಲಿಮರ ಮೇಲೆ ಕೊರೋನಾ ವೈರಸ್ ಹರಡಿದ ಸುಳ್ಳು ಆರೋಪ ಹೊರಿಸಿದ ಬೆನ್ನಿಗೆ ಹಲವಾರು ಮುಸ್ಲಿಂ ವಿರೋಧಿ ಹಿಂಸಾಚಾರಗಳು, ಬಹಿಷ್ಕಾರ ಹಾಕಿದ ಘಟನೆಗಳು ನಡೆಯುತ್ತಲೇ ಇವೆ. ಆದರೆ ಲಾತೂರ್‌ನ ಈ ಘಟನೆಯು ಇಂತಹ ಪರಿಸ್ಥಿತಿಯಲ್ಲಿಯೂ ಜನರಲ್ಲಿ ಮಾನವೀಯತೆಯ ನಂಬಿಕೆಯನ್ನು ಜಾಗೃತಗೊಳಿಸಿದೆ.

 

ಪವಿತ್ರ ರಮಝಾನ್ ತಿಂಗಳು ಮುಗಿದು ಭಾರತದಲ್ಲಿ ಈದುಲ್ ಫಿತ್ರ್ ಆಚರಿಸಲಾಗುತ್ತಿದೆ. ಲಾಕ್‌ಡೌನ್ ಕಾರಣ ಈ ವರ್ಷದ ಈದ್ ಅಸಾಮಾನ್ಯವಾಗಿದೆ. ಕೊರೋನಾ ವೈರಸ್ ಹೆದರಿಕೆಯಿಂದಾಗಿ ಸಾಮೂಹಿಕ ಪ್ರಾರ್ಥನೆಗಳಿಗೆ ಅವಕಾಶವಿಲ್ಲ. ಜನರಿಗೆ ಮನೆಯಲ್ಲೇ ಇರಲು ಸೂಚಿಸಲಾಗಿದೆ. ಸಮುದಾಯದ ಮುಖಂಡರೂ ಕೂಡ್ ಈದ್ ಆಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಬೇಕೆಂದು ಜನರಿಗೆ ಮನವಿ ಮಾಡಿದ ಬೆನ್ನಿಗೆ ಮಾರುಕಟ್ಟೆಗಳು ಸ್ಥಬ್ದವಾಗಿದ್ದವು.