ಫೆಲೆಸ್ತೀನಿಯರ ವಿರುದ್ಧ ಇಸ್ರೇಲಿನ ಅಪರಾಧವನ್ನು ಇತಿಹಾಸ ಮರೆಯದು -ಕತರ್

0
315

ಸನ್ಮಾರ್ಗ ವಾರ್ತೆ

ದೋಹ, ಮಾ.7: ಗಾಝದಲ್ಲಿ ಫೆಲೆಸ್ತೀನಿಯರ ವಿರುದ್ಧ ಅಪರಾಧ ಕೃತ್ಯ ಮಾಡುವವರನ್ನು ಮತ್ತು ಅವರನ್ನು ಬೆಂಬಲಿಸುತ್ತಿರುವವರನ್ನು ಅದರ ವಿರುದ್ಧ ಕಣ್ಣು ಮುಚ್ಚಿ ಕುಳಿತವರನ್ನು ಇತಿಹಾಸ ಮರೆಯದು ಮತ್ತು ಕ್ಷಮಿಸದು ಎಂದು ಕತರ್ ಎಚ್ಚರಿಸಿದೆ.

ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಸಾಧ್ಯತೆಗಳನ್ನು ಇಲ್ಲದಾಗಿಸಲು ಫೆಲೆಸ್ತೀನಿನಲ್ಲಿ ಇಸ್ರೇಲ್ ಸಾಮೂಹಿಕ ಹತ್ಯೆ, ನಾಶವನ್ನು ಮಾಡುತ್ತಿದೆ ಎಂದು ಜನೀವಾದ ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ಕತರ್ ನ ಕಾಯಂ ಪ್ರತಿನಿಧಿ ಹಿಂದ್ ಅಬ್ದುರ್ರಹ್ಮಾನ್ ಅಲ್ ಮುಫ್ತ ಹೇಳಿದರು.

ಫೆಲೆಸ್ತೀನಿನ ಜನಸಾಮಾನ್ಯರ ಮೇಲಿನ ದಾಳಿ ಅವರನ್ನು ಹಸಿವಿಗೆ ದೂಡಿದೆ ಎಂದು ಅವರು ಹೇಳಿದರು.
ಮಾನವೀಯತೆ ಹೆಚ್ಚು ಅನಿವಾರ್ಯವಾದ ಪರಿಸ್ಥಿತಿ ಇದು. ದಿಗ್ಬಂಧ ಮತ್ತು ಹಸಿವಿಗೆ ದೂಡಿ ಹಾಕಿ ಹೀನವಾದ ಅಪರಾಧಗಳು ಇಸ್ರೇಲಿನಿಂದಾಗುತ್ತಿದೆ ಎಂದು ಹಿಂದ್ ಅಲ್‍ ಮುಫ್ತಾ ಹೇಳಿದರು.

ಗಾಝದ ಸಂಪೂರ್ಣ ದಿಗ್ಬಂಧ ಮತ್ತು ಸಹಾಯ ವಿತರಣೆಗೆ ಅಡಚಣೆ ಮಾಡುತ್ತಿರುವ ಕಾರಣ 22 ಲಕ್ಷ ಫೆಲೆಸ್ತೀನಿಯರು ಹಸಿವಿನಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪೋಷಕಾಹಾರ ಕೊರತೆ ನಿರ್ಜಲೀಕರಣದಿಂದ 16 ಮಕ್ಕಳು ಈ ನಡುವೆ ಸಾವಿಗೆ ಶರಣಾಗಿವೆ ಎಂದು ಫೆಲೆಸ್ತೀನಿನ ಮೂಲಗಳು ಬಹಿರಂಗ ಪಡಿಸಿವೆ. ಕೇವಲ ಖಂಡನೆಗಳಿಗಿಂತ ಆಚೆ ಇಸ್ರೇಲ್ ವಿರುದ್ಧ ಯಾವುದೇ ಕ್ರಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ತಯಾರಾಗಬೇಕೆಂದು ಅಲ್ ಮುಫ್ತ ಮನವಿ ಮಾಡಿದರು.